ನಾನು ಮೊದಲ ಮಗನಾಗಿ ಹುಟ್ಟಿದ್ದೇನೆ : ಕಾರ್ಯಕ್ರಮದ ಕೊನೆಯ ಭಾಷಣ ಮಾಡ್ತಿದ್ದೇನೆ – ರಾಜವಂಶಸ್ಥ ಯದುವೀರ್ ರಿಂದ ಅಚ್ಚರಿ ಮಾತು.

kannada t-shirts

ಮೈಸೂರು,ಜು,16,2019: ಮೊದಲ ಮಗ ಆಗಬೇಡ, ಕೊನೆಯ ಭಾಷಣ ಮಾಡಬೇಡ ಅಂತ ನಮ್ಮ‌ಕನ್ನಡ‌ ಮೇಷ್ಟ್ರು ಹೇಳುತ್ತಿದ್ರು. ನಾನುಮೊದಲ ಮಗನಾಗಿ ಹುಟ್ಟಿದ್ದೇನೆ ಕಾರ್ಯಕ್ರಮದ ಕೊನೆಯ ಭಾಷಣ ಮಾಡ್ತಿದ್ದೇನೆ ಎಂದು ಮೈಸೂರು ರಾಜವಂಶಸ್ಥ ಯದುವೀರ್ ರಿಂದ ಅಚ್ಚರಿ ಮಾತುಗಳನ್ನಾಡಿದ್ದಾರೆ.

ಜಯಚಾಮರಾಜ ಒಡೆಯರ್ ಜನ್ಮ‌ಶತಾಬ್ದಿ ಕಾರ್ಯಕ್ರಮದಲ್ಲಿ ಯದುವೀರ್ ಈ ಹೇಳಿಕೆ ನೀಡಿದ್ದಾರೆ.  ನಾನು‌ ಮೊದಲ ಮಗನಾಗಿ  ಕಷ್ಟ ಅನುಭವಿಸಿದ್ದೇನೆ. ಅದು ಯಾರಿಗೂ ಬೇಡ, ಅದನ್ನ‌ ಇಲ್ಲಿ ಹೇಳುವ ಸಂದರ್ಭವು ಅಲ್ಲ. ಜಯಚಾಮರಾಜ ಒಡೆಯರ್  ಕೊಡುಗೆ ಅಪಾರ. ಅವರ ಕೊಡುಗೆ ಎಲ್ಲಾ ಕಡೆ ಇದೆ. ಕರ್ನಾಟಕದ ಏಕೀಕರಣಕ್ಕೂ ರಾಜಮನೆತನದ ಕೊನೆಯ ರಾಜ  ಜಯಚಾಮರಾಜ ಒಡೆಯರ್ ಅವರ ಕೊಡುಗೆ ಅಪಾರ. ಅವರ ಬಗ್ಗೆ ಹೇಳಲು ಗಂಟೆಗಳು ಸಾಲದು. ಅವರು ಕಟ್ಟಿಕೊಟ್ಟ ಸುವರ್ಣ ಯುಗವನ್ನ‌ ನಾವು ಮತ್ತೆ ನೋಡಬೇಕು. ಮತ್ತೆ ಸುವರ್ಣಯುಗವನ್ನ ನಾವು ನೋಡಲು ಹಾಕಿಕೊಳ್ಳುವ ಯೋಚನೆ ಮುಖ್ಯ. ನಾವು ಮುಂದಿನ ಯುವ ಪೀಳಿಗೆಗೆ ಸುವರ್ಣ ಯುಗವನ್ನ ಕಟ್ಟಲು ಈಗಿನಿಂದಲೂ ಕಾರ್ಯಾಚಾರಣೆಯನ್ನ ಆರಂಭ ಮಾಡಬೇಕು ಎಂದರು.

ಅರಸಿನಕೆರೆಯಲ್ಲಿ ನಂದಿ ವಿಗ್ರಹಗಳು ಸಿಕ್ಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್ , ಅದಕ್ಕೂ ರಾಜಮನೆತನಕ್ಕೂ  ಸಂಬಂಧ ಇದೆ ಆದರೆ ಅದರ ಬಗ್ಗೆ ನಮಗೆ ಇನ್ನು ಮಾಹಿತಿ ಸಿಕ್ಕಿಲ್ಲ. ನಂದಿ ವಿಗ್ರಹವನ್ನ  ಹೊರ ತೆಗೆದಿರೋದು  ಖುಷಿ ತಂದಿದೆ.ಇನ್ನೆರಡು ಮೂರೂ ದಿನಗಳಲ್ಲಿ ನಾನು ಸ್ಥಳಕ್ಕೆ ಭೇಟಿ ನೀಡ್ತೇನೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಪರಂಪರೆ ಕಟ್ಟಡಗಳ ಸಂರಕ್ಷಣೆ ಗೆ ನಮ್ಮ ಅಮ್ಮನವರ ಕಡೆಯಿಂದ ಒಂದು ಪೌಂಡೇಶನ್  ತೆರೆದಿದ್ದೇವೆ. ಸರ್ಕಾರ ದಿಂದ ಕೋರಿಕೆ  ಬಂದ್ರೆ ಸಂರಕ್ಷಣೆ ಮಡಲು ಸಿದ್ದ. ಆಭಾಗದಲ್ಲಿ 10 ಚಾಮರಾಜ ಒಡೆಯರ್ ಯಾವುದೂ ಕಾಮಗಾರಿಗೆ ಪೂಜೆ ಸಲ್ಲಿಸಿದ್ದರ ಬಗ್ಗೆ ಮಾಹಿತಿ ಇದೆ. ಅರಮನೆಯ ವಿಗ್ರಹಗಳು ,ಹಾಗೂ ಸಂಪತ್ತನ್ನ ರಕ್ಷಣೆ ಮಾಡುವುದು ಸರ್ಕಾರದ ಕೆಲಸ. ಇದನ್ನು ಸರ್ಕಾರದವರೆ ರಕ್ಷಣೆ ಮಾಡಬೇಕು.ಸರ್ಕಾರಕ್ಕೆ ನಮ್ಮಿಂದ ಏನಾದ್ರು ಸಹಾಯ ಬೇಕಿದ್ರೆ ಅರಮನೆ ಯಾವಾಗಲು ತೆರೆದ ಬಾಗಿಲು  ಎಂದರು.

ಜಯಚಾಮರಾಜ ಒಡೆಯರ್ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ  ಮಾತನಾಡಿದ ಪ್ರಮೋದ ದೇವಿ ಒಡೆಯರ್,  ರಾಜಮನೆತನ ಹಿಂದಿನಿಂದಲೂ ವಿದ್ಯಾಭ್ಯಾಸಕ್ಕೆ ಹೆಚ್ಚು ಮನ್ನಣೆ ಕೊಟ್ಟಿದೆ. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದೆ. ಇದನ್ನ ನಾವು ನಿರಂತರವಾಗಿ ಮಾಡುತ್ತೇವೆ.  ಟ್ರಸ್ಟ್  ನವರು ಇದನ್ನ ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Key words: Yadavir –speach-Jayachamaraja Wodeyar- Birthday –Program-mysore

website developers in mysore