ಪೊಲೀಸ್ ಇಲಾಖೆಗೆ ಸಿಹಿಸುದ್ದಿ ನೀಡಿದ ಸಿಎಂ ಹೆಚ್.ಡಿಕೆ: ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್…

ಬೆಂಗಳೂರು,ಜು,16,2019(www.justkannada.in):  ಅತಂತ್ರ ಸ್ಥಿತಿ ನಡುವೆಯೂ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಪೊಲೀಸ್ ಇಲಾಖೆಗೆ ಸಿಹಿಸುದ್ದಿ ನೀಡಿದ್ದಾರೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಔರದ್ಕರ್ ವರದಿ ಜಾರಿಗೆ ರಾಜ್ಯ ಸಮ್ಮಿಶ್ರ ಸರ್ಕಾರ ನಿರ್ಧರಿಸಿದೆ.

ವೇತನ ಪರಿಷ್ಕರಣೆ ಮತ್ತು ಬಡ್ತಿ ತಾರತಮ್ಯ ನಿವಾರಣೆ ಸೇರಿದಂತೆ ಪೊಲೀಸರ  ಹಲವು ಬೇಡಿಕೆ ಮತ್ತು ಸಮಸ್ಯೆಗಳಿಗೆ ಸಂಬಂಧಿಸಿದ ಔರದ್ಕರ್ ವರದಿಗೆ  ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಸಹಿ ಹಾಕಿದ್ದಾರೆ. ಈ ಮೂಲಕ ಶೇ. 30ರಷ್ಟು ಬದಲಾಗಿ ಶೇ.12.5 ರಷ್ಟು ವೇತನ ಹೆಚ್ಚಳ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ. ಈಗಾಗಲೇ ಈ ಕಡತ ಆರ್ಥಿಕ ಇಲಾಖೆಗೆ ತಲುಪಿದೆ ಎನ್ನಲಾಗಿದೆ.

ಅಂದು ಸಿದ್ದರಾಮಯ್ಯ ಸರ್ಕಾರದ ವೇಳೆ ವೇತನ ಪರಿಷ್ಕರಣೆ ಸಂಬಂಧ ಬೇಡಿಕೆ ಕೇಳಿಬಂದಿತ್ತು. ಈಹಿನ್ನೆಲೆ ಈ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ರಾಘವೇಂದ್ರ ಔರದ್ಕರ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಔರದ್ಕರ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು.

 

ಇದೀಗ ಔರದ್ಕರ್ ವರದಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಹಿ ಹಾಕಿದ್ದು  ಶೀಘ್ರದಲ್ಲೇ ಪೋಲಸರ ವೇತನ ಹೆಚ್ಚಳವಾಗಲಿದೆ.

Key words: CMHDK—goodnews- Police Department- Green signal