ರೇಣುಕಾಸ್ವಾಮಿ – ಪವಿತ್ರಾ ಗೌಡ ಸಂದೇಶ ವಿವರ :  ʼ  ಇನ್ಸ್ಟಾಗ್ರಾಮ್ಗೆʼ ಮೊರೆ ಹೋದ ಪೊಲೀಸರು.

Police are planning to write Instagram seeking details of the messages between  Renukaswamy  and Pavithra Gowda.

 

ಬೆಂಗಳೂರು, ಜೂ.21,2024: (www.justkannada.in news) ನಟ ದರ್ಶನ್ ತೂಗುದೀಪ ಅವರ ಮೇಲಿನ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ , ಚಿತ್ರದುರ್ಗದ ರೇಣುಕಾಸ್ವಾಮಿ ಮತ್ತು ನಟನ ಸ್ನೇಹಿತೆ ಪವಿತ್ರಾ ಗೌಡ ನಡುವಿನ ಸಂದೇಶಗಳ ವಿವರಗಳನ್ನು ಕೋರಿ ಸಾಮಾಜಿಕ ಮಾಧ್ಯಮ ʼ  ಇನ್ಸ್ಟಾಗ್ರಾಮ್ಗೆʼ  ಪತ್ರ ಬರೆಯಲು ಪೊಲೀಸರು  ಮುಂದಾಗಿದ್ದಾರೆ.

ಈಗಾಗಲೇ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 17 ಜನರನ್ನು ಬಂಧಿಸಿದ್ದು ಈ ಪೈಕಿ ನಟ ದರ್ಶನ್‌  ಸೇರಿದಂತೆ ನಾಲ್ವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ. ನಟಿ ಪವಿತ್ರಗೌಡ ಸೇರಿ ಇತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಗಂಭೀರತೆ ಮತ್ತು ಮಹತ್ವವನ್ನು ಪರಿಗಣಿಸಿ ರಚಿಸಲಾಗಿರುವ ಎಸ್ಐಟಿಯ ನೇತೃತ್ವವನ್ನು ವಿಜಯನಗರ ಎಸಿಪಿ  ಚಂದನ್‌ ವಹಿಸಿದ್ದಾರೆ. ಜತೆಗೆ ಡಿಸಿಪಿ (ಪಶ್ಚಿಮ) ಇಡೀ ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದಾರೆ

ಕಳೆದ ಕೆಲ ದಿನಗಳಿಂದ ಪೊಲೀಸರು ರೇಣುಕಸ್ವಾಮಿ  ಫೋನ್ ಗಾಗಿ ಸುಮ್ಮನಹಳ್ಳಿಯ ಅಪಾರ್ಟ್ಮೆಂಟ್ ಬಳಿಯ ಚರಂಡಿಯಲ್ಲಿ ಹುಡುಕಾಟ ನಡೆಸುತ್ತಿದ್ದು, ಇದು ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯವಾಗಲಿದೆ.

ನಟಿ ಪವಿತ್ರಾ ಗೌಡ ಫೋನ್  ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಸಂದೇಶಗಳಿವೆ, ರೇಣುಕಾಸ್ವಾಮಿ  ಫೋನ್ನಿಂದ ಡೇಟಾವನ್ನು ಮರುಪಡೆಯುವುದು ಪ್ರಕರಣದ ಸಾಕ್ಷಿಗೆ ಮುಖ್ಯವಾಗಿದೆ, ಇದು ಕೊಲೆಯ ಹಿಂದಿನ ಉದ್ದೇಶವನ್ನು ಸಾಬೀತುಪಡಿಸಲು ಸಹಾಯ ಮಾಡುತ್ತದೆ ಎಂದಿರುವ ಪೊಲೀಸರು, ಈನಿಟ್ಟಿನಲ್ಲಿ ಸೋಷಿಯಲ್‌ ಮೀಡಿಯಾ ಇನ್ಸ್‌ ಸ್ಟಗ್ರಾಂ  ನೆರವಿಗೆ ಮೊರೆ ಹೋಗಲು ಉದ್ದೇಶಿಸಿದ್ದಾರೆ.

ಅಶ್ಲೀಲ ಸಂದೇಶ:

ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಹಾಗೂ ಹತ್ಯೆ ಘಟನೆಗೆ ಕಾರಣವಾಗಿರುವ ಅಂಶವೇ, ನಟಿ ಪವಿತ್ರಗೌಡಗೆ ಹತ್ಯಗೀಡಾದ ರೇಣುಕಾಸ್ವಾಮಿ ಕಳುಹಿಸಿದ ಅಶ್ಲೀಲ ಸಂದೇಶ. ಮೂಲಗಳ ಪ್ರಕಾರ ರೇಣುಕಾಸ್ವಾಮಿ, ನಟಿ ಪವಿತ್ರಗೌಡಗೆ ತನ್ನ ಮರ್ಮಾಂಗದ ಫೋಟೋಗಳನ್ನು ಕಳುಹಿಸಿ ಅಶ್ಲೀಲ ಟೆಕ್ಸ್ಟ್‌ ಮೆಸೇಜ್‌ ಮಾಡಿದ್ದ. ಇದನ್ನು ತಡೆಗಟ್ಟಲು ಪವಿತ್ರಗೌಡ, ರೇಣುಕಾಸ್ವಾಮಿ ನಂಬರ್‌ ಅನ್ನು ಬ್ಲಾಕ್ ಲಿಸ್ಟ್‌ ಗೆ ಹಾಕಿದ್ದರು. ಆದರೂ ರೇಣುಕಾಸ್ವಾಮಿ, ಬೇರೆ ನಂಬರ್‌ ನ ಮೊಬೈಲ್‌ ಫೋನ್‌ ಮೂಲಕ ತನ್ನ ಕುಕೃತ್ಯವನ್ನು ಮುಂದುವರಿಸಿದ್ದ. ಇದರಿಂದ ರೋಸಿ ಹೋದ ಪವಿತ್ರಗೌಡ, ವಿಷಯವನ್ನು ನಟ ದರ್ಶನ್‌ ಸ್ನೇಹಿತರಿಗೆ ತಿಳಿಸಿದ್ದರು. ಇದು ನಟ ದರ್ಶನ್‌ ಕಿವಿಗೂ ಬಿದ್ದು ಈ ಅವಘಡಕ್ಕೆ ಕಾರಣವಾಯಿತು.

key words:  Police are planning, to, seeking details, of the messages, between, Renuka swamy, Pavithra Gowda.

 

SUMMARY:

Police are planning to write to social media site Instagram seeking details of the messages between Kannada star Darshan Thoogudeepa’s murdered fan Renukaswamy  and the actor’s friend Pavithra Gowda.