ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ : ಆರ್.ಟಿ.ಐ ಕಾರ್ಯಕರ್ತರಿಗೆ ಸನ್ಮಾನ

ಬೆಂಗಳೂರು,ಡಿಸೆಂಬರ್,16,2020(www.justkannada.in) : ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂಶೋಧನಾ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ‘’ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ’’ ಕಾರ್ಯಕ್ರಮದಲ್ಲಿ ನಗರದ ಆರ್.ಟಿ.ಐ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.I didn't knew CM BSY will think so cheaply - KPCC President D.K. Shivakumar

ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬುಧವಾರ ನಡೆದ ’ವಿಶ್ವ ಮಾನವ ಹಕ್ಕುಗಳ ಸಂಭ್ರಮಾಚರಣೆ’’ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ, ವಕೀಲ ವಿ.ರವಿಕುಮಾರ್, ಪತ್ರಕರ್ತ,ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ, ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್, ಆರ್.ಟಿ.ಐ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಡಿ.ಎನ್.ನಾಗೇಂದ್ರ, ವಿಶ್ವ ಪ್ರಜ್ಞಾ ಚಾರಿಟಬಲ್ ಟ್ರಸ್ಟ್ ನಿರ್ವಾಹಕ ಹಾಗೂ ಸಾಮಾಜಿಕ ಹೋರಾಟಗಾರ ಎಂ.ರವೀಂದ್ರ, ಸಾಮಾಜಿಕ ಹೋರಾಟಗಾರ ನಗರ್ಲೆ ಎಂ.ವಿಜಯಕುಮಾರ್, ಕೆ.ರವಿ, ಸಿಟಿ ಬ್ಯಾಂಕ್ ಅಧ್ಯಕ್ಷ ಬಿ.ಎಸ್.ಲೋಕೇಶ್ವರ್, ದೈಹಿಕ ಶಿಕ್ಷಣ ನಿರ್ದೇಶಕ ಸಿದ್ದರಾಜು ಅವರನ್ನು ಸನ್ಮಾನಿಸಲಾಯಿತು.

 

World-Human-Rights-Celebration-Felicitation-RTI-Activists

ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ವಹಿಸಿದ್ದರು.

World-Human-Rights-Celebration-Felicitation-RTI-Activists

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಡಿಸಿಪಿ ಡಾ.ಪ್ರಕಾಶ್ ಗೌಡ, ಗಾಂಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಎಂ.ಶೇಖರ್ ಇತರರು ಉಪಸ್ಥಿತರಿದ್ದರು.

Englsih summary….

World Human Rights celebration: RTI, Social activists felicitated
Bengaluru, Dec.16,2020 (www.justkannada.in): Advocate V. Ravikumar, journalist, social activist Krishna, Environment Conservation Committee President Bhanu Mohan, RTI activist and social activist D.N. Nagendra, Vishwa Prajna Charitable Trust Manager and social activist M. Raveendra, social activist Nagarle M. Vijaykumar, K. Ravi, City Bank Chairman B.S. Lokeshwar, Physical Instruction Director Siddaraju were felicitated on the occasion of the ‘World Human Rights’ day, at a programme organised by the Human Rights Protection And Corruption Eradication Forum, and District Legal Services Forum, in association with the Research Students’ Association, in Mysuru today.
Senior Civil Judge and District Legal Services Forum Member Secretary B.P. Devamane presided over the programme. Prof. G. Hemanth Kumar, Vice-Chancellor, University of Mysore, DCP Dr. Prakash Gowda, Gandhi Research Institute Director M. Shekar, and others were present on the occasion.
Keywords: World Human Rights Day celebration/ University of Mysore/ felicitation/ social activists.

key words : World-Human-Rights-Celebration-Felicitation-RTI-Activists