350ಕ್ಕೂ ಹೆಚ್ಚು ಮಕ್ಕಳಿಗೆ ಕಾಕ್ಲಿಯರ್ ಇನ್ ಪ್ಲಾಂಟ್ ಸರ್ಜರಿ: ಶ್ರವಣ ದೋಷ ಮಕ್ಕಳ ಕಡೆಗಣಿಸಬೇಡಿ-ಸಚಿವ ದಿನೇಶ್ ಗುಂಡೂರಾವ್.  

 ಮೈಸೂರು, ಮಾರ್ಚ್,12,2024(www.justkannada.in): 350ಕ್ಕೂ ಹೆಚ್ಚು ಶ್ರವಣದೋಷ ಮಕ್ಕಳಿಗೆ ಕಾಕ್ಲಿಯರ್ ಇನ್ ಪ್ಲಾಂಟ್ ಸರ್ಜರಿ ಮಾಡಲಾಗಿದ್ದು, ಶ್ರವಣ ದೋಷ ಮಕ್ಕಳನ್ನ ಕಡೆಗಣಿಸಬೇಡಿ. ಅವರಿಗೆ ಸೂಕ್ತ ಚಿಕಿತ್ಸೆ ಮೂಲಕ ಮಾತು ಬರುವ  ಹಾಗೆ ಮಾಡಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು.

ವಿಶ್ವ ಶ್ರವಣ ದಿನಾಚರಣೆ ಪ್ರಯುಕ್ತ ಮೈಸೂರು ಮಾನಸ ಗಂಗೋತ್ರಿಯ ವಾಕ್ ಮತ್ತು ಶ್ರವಣ ಸಂಸ್ಥೆಯ ಜ್ಞಾನ ಉದ್ಯಾನವನ ಆವರಣದಲ್ಲಿ ಆಯೋಜಿಸಿದ್ದ’ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯ ಮರು ನಾಮಕರಣ ಹಾಗೂ ಇಂಪ್ಲಾಂಟ್ ಕಾಪಾಡುವಿಕೆ’  ಕಾರ್ಯಕ್ರಮಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ವಾಕ್ ಮತ್ತು ಶ್ರವಣ ತರಬೇತಿ ಕೇಂದ್ರವನ್ನ ಸಚಿವ ದಿನೇಶ್  ಗುಂಡೂರಾವ್  ಉದ್ಘಾಟನೆ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್,  ನಮ್ಮ ಸರ್ಕಾರ ಸದಾ ಬಡವರು ಮತ್ತು ಮಧ್ಯಮ ವರ್ಗದ ಪರವಾಗಿದೆ. ಹುಟ್ಟಿನಿಂದಲೇ ಶ್ರವಣದೋಷ ಹೊಂದಿದ ಮಕ್ಕಳಿಗೆ ಕಾಕ್ಲೀಯರ್ ಇನ್  ಫ್ಲಾಂಟ್  ಶಸ್ತ್ರ ಚಿಕಿತ್ಸೆಯ ಮೂಲಕ‌ ಶ್ರವಣ ದೋಷ ಮುಕ್ತ ಕರ್ನಾಟಕ ಮಾಡುವುದೇ ನಮ್ಮ ಗುರಿ. ಇದು ದೇಶದಲ್ಲೇ ಮೊಟ್ಟ ಮೊದಲ ಪ್ರಯೋಗ. ನಮ್ಮ‌ ಅಧಿಕಾರಾವಧಿಯಲ್ಲೇ ಈ ರೀತಿಯ ಆರೋಗ್ಯ ಹೊಸ ಯೋಜನೆಗಳ ಜಾರಿಗೆ ಬರಲು ಸಾಧ್ಯ.  ಶ್ರವಣ ಸಂಜೀವಿನಿ ಕಾರ್ಯಕ್ರಮ ಮತ್ತಷ್ಟು ಯಶಸ್ವಿಯಾಗಿಲಿ ಎಂದು ಶುಭ ಹಾರೈಸಿದರು.

ಶ್ರವಣ ದೋಷ ಹೊಂದಿದ ಸುಮಾರು 350ಕ್ಕೂ ಹೆಚ್ಚು ಮಕ್ಕಳು ಕಾಕ್ಲಿಯರ್ ಇನ್ ಪ್ಲಾಂಟ್ ಸರ್ಜರಿ ಮಾಡಲಾಯತು. 500 ಕ್ಕೂ ಹೆಚ್ಚು ಮಕ್ಕಳ ನೋಂದಣಿ ಮಾಡಿದ್ದರು.ಆದರೆ 351 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆಗೊಳಗಾದ  ಮಕ್ಕಳಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೇಕ್ ಕತ್ತರಿಸಿದರು. ಇದೇ ವೇಳೆ ಶ್ರವಣ ದೋಷ ಮಕ್ಕಳ ಕೆಲವು ಉಪಕರಣಗಳನ್ನು ಫಲಾನುಭವಿ ಮಕ್ಕಳಿಗೆ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಕೆ.ಹರೀಶ್ ಗೌಡ, ತನ್ವೀರ್ ಸೇಠ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಡಾ.ಪುಷ್ಪಾಲತಾ, ಸ್ವೀಚ್ ಅಂಡ್ ಹೀಯರಿಂಗ್ ನಿರ್ದೇಶಕ ಡಾ.ಪುಷ್ಪಾವತಿ ಮತ್ತಿತರರು ಭಾಗಿಯಾಗಿದ್ದರು.

Key words: World Hearing Day -surgery – children-mysore- AIISH-Minister -Dinesh Gundurao.