Tuesday, September 15, 2026

BDA Apartments

ವಿಶ್ವಕಪ್ ಕ್ರಿಕೆಟ್: ಇಂದು ಪಾಕಿಸ್ತಾನ-ಶ್ರೀಲಂಕಾ ಮುಖಾಮುಖಿ BDA JK_Adv BDA Adv
Home Cinema ವಿಶ್ವಕಪ್ ಕ್ರಿಕೆಟ್: ಇಂದು ಪಾಕಿಸ್ತಾನ-ಶ್ರೀಲಂಕಾ ಮುಖಾಮುಖಿ

ವಿಶ್ವಕಪ್ ಕ್ರಿಕೆಟ್: ಇಂದು ಪಾಕಿಸ್ತಾನ-ಶ್ರೀಲಂಕಾ ಮುಖಾಮುಖಿ

ಲಂಡನ್, ಜೂನ್ 07, 2019 (www.justkannada.in): ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಇಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿವೆ.

ಬ್ರಿಸ್ಟಾಲ್ ನಲ್ಲಿ ನಡೆಯುತ್ತಿರುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದ್ದು, ಪಾಕಿಸ್ತಾನ ಆಡಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೆ ಮತ್ತೊಂದರಲ್ಲಿ ಸೋಲುಂಡು ಪಾಯಿಂಟ್ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ.

ಶ್ರೀಲಂಕಾ ಕೂಡ ರನ್ ರೇಟ್ ಆಧಾರದಲ್ಲಿ 7 ನೇ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲಿನ ಬಳಿಕ ಇಂಗ್ಲೆಂಡ್ ತಂಡದ ವಿರುದ್ಧ 21 ರನ್ ಗಳ ಭರ್ಜರಿ ಗೆಲುವು ಸಾಧಿಸಿರುವ ಪಾಕಿಸ್ತಾನ ಇಂದಿನ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸದಲ್ಲಿದೆ.

ಇನ್ನು ಶ್ರೀಲಂಕಾ ಕೂಡ ಡಕ್ವರ್ತ್ ನಿಯಮದ ಅನ್ವಯ ಅಫ್ಘಾನಿಸ್ತಾನದ ವಿರುದ್ಧ ಗೆದ್ದು ವಿಶ್ವಾಸದಲ್ಲಿದೆ.