ವಿಶ್ವಕಪ್: ಇಂದು 2ನೇ ಗೆಲುವಿಗಾಗಿ ವಿಂಡೀಸ್-ಆಸಿಸ್ ಸೆಣೆಸಾಟ

ಇಂಗ್ಲೆಂಡ್, ಜೂನ್ 06, 2019 (www.justkannada.in): ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳು ಪರಸ್ಪರ ಎದುರಾಗಲಿವೆ.

ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿದ್ದ ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ ವಿರುದ್ಧ ಗೆದ್ದಿದ್ದ ಆಸ್ಟ್ರೇಲಿಯಾ 2ನೇ ಗೆಲುವಿಗಾಗಿ ಪರಸ್ಪರ ಸೆಣೆಸಾಡಲಿವೆ.

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾದಲ್ಲಿ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ನಂಥ ಘಟಾನುಘಟಿಗಳಿದ್ದರೆ, ವಿಂಡೀಸ್‌ನಲ್ಲಿ ಕ್ರಿಸ್‌ಗೇಲ್, ಆಯಂಡ್ರೆ ರಸೆಲ್‌ನಂತ ಅಪಾಯಕಾರಿ ಆಟಗಾರರಿದ್ದಾರೆ. ಪಂದ್ಯದಲ್ಲಿ ಆಸೀಸ್ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ.