ಸ್ವಿಚ್ ಹಾಕಲು ಹೋದಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕ ದುರ್ಮರಣ.

ದಾವಣಗೆರೆ,ಫೆಬ್ರವರಿ,8,2023(www.justkannada.in): ಸ್ವಿಚ್ ಹಾಕಲು ಹೋದಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಿಡ್ಲಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಚನ್ನಗಿರಿ ತಾಲ್ಲೂಕು ಗೆದ್ದಲಹಟ್ಟಿ ಗ್ರಾಮದ ಕಾರ್ಮಿಕನೋರ್ವ ಮೃತಪಟ್ಟಿದ್ದಾರೆ.   ಸುರೇಶ್ ಎಂಬುವವರಿಗೆ ಸೇರಿದ ಆಕಾಶ್ ರೈಸ್ ಮಿಲ್ ನಲ್ಲಿ  ಈ ಘಟನೆ ನಡೆದಿದೆ.

ನೀರಿಗಾಗಿ ಪಂಪ್ ಸೆಟ್ ಆನ್ ಮಾಡಲು ಹೋಗಿದ್ದಾಗ ಕಾರ್ಮಿಕನಿಗೆ ವಿದ್ಯುತ್ ಶಾಕ್ ಹೊಡೆದಿದ್ದು, ಇದರಿಂದ ಗಂಭೀರ ಗಾಯಗೊಂಡ ಕಾರ್ಮಿಕನನ್ನ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕಾರ್ಮಿಕ ಸಾವನ್ನಪ್ಪಿದ್ದಾರೆ.

Key words: Worker-dies- due – electric- current – switch.