ರೆಪೋ ದರ ಶೇ 6.5ಕ್ಕೆ ಏರಿಸಿದ ಆರ್ ಬಿಐ.

ಮುಂಬೈ,ಫೆಬ್ರವರಿ,8,2023(www.justkannada.in): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇ.6.5ಕ್ಕೆ ಏರಿಕೆ ಮಾಡಿದೆ.

ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ವರ್ಷದ ಮೊದಲ ಹಣಕಾಸು ನೀತಿ ವರದಿಯನ್ನು ಮಂಡಿಸಿದ್ದು, ರೆಪೋ ದರಗಳನ್ನು 25 ಬೇಸಿಸ್‌ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದಾರೆ. 25 ಬೇಸಿಸ್‌ ಪಾಯಿಂಟ್‌ ಹೆಚ್ಚಳದ ಮೂಲಕ ರೆಪೋ ದರಗಳು 6.5%ಕ್ಕೇರಿದಂತಾಗಿದೆ. ಹೀಗಾಗಿ ಬಡ್ಡಿದರಗಳು ಹೆಚ್ಚಲಿವೆ.

ಭಾರತದದ ಆರ್ಥಕತೆಯಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. 2022ರ ಡಿಸೆಂಬರ್ ನಲ್ಲಿ ರೆಪೊದರ ಶೇ.6.25ಕ್ಕೆ  ಏರಿಸಲಾಗಿತ್ತು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

2022ರ ಮೇ ತಿಂಗಳ ನಂತರ ಸತತವಾಗಿ ಆರ್​ಬಿಐ ರೆಪೊ ದರ ಹೆಚ್ಚಿಸುತ್ತಾ ಬಂದಂತಾಗಿದ್ದು, ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ ಆರ್​ಬಿಐ 250 ಮೂಲಾಂಶದಷ್ಟು ರೆಪೊ ದರ ಹೆಚ್ಚಿಸಿದಂತಾಗಿದೆ. ಕಳೆದ ಕೆಲವು ಹಣಕಾಸು ನೀತಿಗಳಲ್ಲಿ ನಿರಂತರವಾಗಿ ರೆಪೊ ದರ ಹೆಚ್ಚಿಸುತ್ತಾ ಬಂದಿರುವುದು ಪರಿಣಾಮ ಬೀರಿದೆ.

Key words: RBI -increased -repo rate -6.5 percent.