ಮಹಿಳಾ ಏಷ್ಯಾ ಕಪ್ ಕ್ರಿಕೆಟ್: ಐತಿಹಾಸಿಕ ಸಾಧನೆ ಮಾಡಿದ ಥಾಯ್ಲೆಂಡ್ ವನಿತೆಯರು

ಬೆಂಗಳೂರು, ಅಕ್ಟೋಬರ್ 12, 2022 (www.justkannada.in): ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಥಾಯ್ಲೆಂಡ್ ವನಿತೆಯರು ಮೊಟ್ಟ ಮೊದಲ ಬಾರಿಗೆ ಸಮಿಫೈನಲ್ ಪ್ರವೇಶಿಸಿದ್ದಾರೆ.

ಹೌದು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾಕಪ್ ಟಿ20 2022ನಲ್ಲಿ ಅಚ್ಚರಿಯ ಫಲಿತಾಂಶ ಹೊರಬಂದಿದೆ.

ಥಾಯ್ಲೆಂಡ್ ವನಿತೆಯರು ಮೊಟ್ಟ ಮೊದಲ ಬಾರಿಗೆ ಸಮಿಫೈನಲ್ ಪ್ರವೇಶಿಸಿದ್ದಾರೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡ ಥಾಯ್ಲೆಂಡ್ ವನಿತೆಯರು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಅಗ್ರಸ್ಥಾನದಲ್ಲಿರುವ ಭಾರತದ ವನಿತೆಯರು 6 ಪಂದ್ಯಕ್ಕೆ 5 ಗೆಲುವು 1 ಸೋಲಿನೊಂದಿಗೆ 10 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನ ಅಲಂಕರಿಸಿ ಸೆಮೀಸ್‌ಗೆ ಪ್ರವೇಶಿಸಿದ್ದಾರೆ.