ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ- ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಅಕ್ಟೋಬರ್,12,2022(www.justkannada.in):  ವ್ಯಕ್ತಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ತುಂಬಾ ಮುಖ್ಯ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿ ಸಮಾಜ ಕಾರ್ಯ ಅಧ್ಯಯನ ವಿಭಾಗ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಕಛೇರಿ, ಮೈಸೂರು ಇವರ ಸಹಯೋಗದೊಂದಿಗೆ  ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ’ಒತ್ತಡ ನಿರ್ವಹಣೆ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

1992ರಿಂದ ಡಬ್ಲೂಎಚ್‌ಒ ಮಾನಸಿಕ ಆರೋಗ್ಯ ದಿನಾಚರಣೆ ಆಚರಿಸುತ್ತಿದೆ. ಈ ವರ್ಷ ‘‘ಎಲ್ಲರ ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮ ಜಾಗತಿಕ ಆದ್ಯತೆ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಕೋವಿಡ್ ನಂತರ ಮಾನಸಿಕ ಕ್ಷೋಬೆ ಹೆಚ್ಚುತ್ತಿದೆ. ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ದೈಹಿಕ ಹಾಗೂ ಮಾನಸಿಕ ಆರೋಗ್ಯ ತುಂಬಾ ಮುಖ್ಯ ಎಂದರು.

ಮನುಷ್ಯ ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ಆರೋಗ್ಯ ಅತ್ಯಗತ್ಯ, ಅದು ದೈವಿಕ ಮತ್ತು ಮಾನಸಿಕ ಆರೋಗ್ಯ ಎರಡನ್ನೂ ಒಳಗೊಂಡಿರುತ್ತದೆ. ವಿಶ್ವ ಮಾನಸಿಕ ಆರೋಗ್ಯ ದಿನದ ಉದ್ದೇಶ, ಮಾನಸಿಕ ಆರೋಗ್ಯ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಈ ದಿನದಂದು ಮಾನಸಿಕ ಅಸಹಜತೆ, ಅವುಗಳನ್ನು ತಡೆಗಟ್ಟುವಿಕೆಯ ಸಂಶೋಧನೆಗಳು ಹಾಗೂ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿ ಸೂಕ್ತದ ಸಲಹೆಗಳನ್ನು ನೀಡುವ ಮುಖಾಂತರ ಸ್ವಸ್ಥ ಮಾನಸಿಕ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದು ಹೇಳಿದರು.

ಖಿನ್ನತೆಯು ಎಲ್ಲ ವಯೋಮಾನದ, ಸಮುದಾಯದ ಸುಮಾರು 350 ಮಿಲಿಯ ಜನರನ್ನು ಬಾಧಿಸುತ್ತಿವೆ. ಜಾಗತಿಕ ಕಾರ್ಯಗಳ ಪೈಕಿ ಖಿನ್ನತೆಯು ಬಹಳ ದೊಡ್ಡದು. ಆದರೂ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯ ಇವೆ, ಆದರೆ ಕೆಲವು ದೇಶಗಳಲ್ಲಿ ಈ ಚಿಕಿತ್ಸೆಯ ಅಳವಡಿಕೆಯೇ ಕಷ್ಟವಾದುದು. ಇನ್ನು ಕೆಲವು ದೇಶಗಳಲ್ಲಿ ಶೇ.10 ಕ್ಕಿಂತಲೂ ಕಡಿಮೆ ಜನರಿಗೆ ಮಾತ್ರ ಲಭ್ಯವಾಗುತ್ತದೆ. ಮಾನಸಿಕ ಆರೋಗ್ಯ ಎಂಬುದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಾನಸಿಕ ಆರೋಗ್ಯ ಹಾಗೂ ಕಾರ್ಯ ವಿಧಾನಗಳಿಗೆ ಸಂಬಂಧಿಸಿದಂತೆ ವ್ಯಾಪಕ ವಿಚಾರಗಳನ್ನು ಒಳಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಆರೋಗ್ಯ ಎಂದರೆ ಕೇವಲ ದೈಹಿಕವಾಗಿರುವುದ್ದಲ್ಲ. ಬದಲಿಗೆ ಅದು ಮನಸ್ಸಿಗೂ ಸಂಬಂಧಪಟ್ಟರುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್ ಭೂತೆ ಮಾತನಾಡಿ, ದೈಹಿಕ ಅನಾರೋಗ್ಯಕ್ಕೆ ನೀಡುವ ಆದ್ಯತೆಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕು. ಸ್ಪರ್ಧಾತ್ಮಕತೆಯಿಂದ ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಯೋಗ, ಧ್ಯಾನ, ಶಿಸ್ತುಬದ್ಧ ಜೀವನದಿಂದ ಮಾನಸಿಕ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬಹುದು. ಎಲ್ಲಾ ಕ್ಷೇತ್ರಗಳಲ್ಲೂ ಒತ್ತಡ ಇರುತ್ತದೆ. ಹಾಗಂತ ಒಂದು ವಿಷಯದ ಬಗ್ಗೆ ಹೆಚ್ಚು ಒತ್ತಡ ತೆಗೆದುಕೊಳ್ಳಬಹುದು ಎಂದು ಹೇಳಿದರು.

ಡಿಎಚ್ ಒ ಡಾ.ಕೆ.ಎಚ್.ಪ್ರಸಾದ್ ಮಾತನಾಡಿ, 20 ಕೋಟಿ ಜನ ಬೇರೆ ಬೇರೆ ವಿಧದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಖಿನ್ನತೆ, ಆವೇಶ, ಒತ್ತಡ ಮಾನಸಿಕ ಆರೋಗ್ಯದ ವಿಧಗಳು. ಅನುವಂಶಿಕವಾಗಿಯೂ ಇದು ಬರುತ್ತದೆ. ಚಿಕಿತ್ಸೆ ನೀಡಿದರೆ ಇದು ಗುಣಮುಖವಾಗುತ್ತದೆ. ಮಾನಸಿಕ ಕಾಯಿಲೆಯಿಂದ ದೂರ ಇರಬೇಕು. ಕೌನ್ಸೆಲಿಂಗ್, ಚಿಕಿತ್ಸೆ ನೀಡುವ ಮೂಲಕ ಮಾನಸಿಕ ಆರೋಗ್ಯವನ್ನು ಗುಣಮುಖ ಮಾಡಬಹುದು ಎಂದು ತಿಳಿಸಿದರು.

ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ವೆಂಕಟೇಶ್ ಮಾತನಾಡಿ, ಬದುಕಿದ್ದವರಿಗೆ ಒತ್ತಡ ಇರುತ್ತದೆ. ಒತ್ತಡವನ್ನು ಪ್ರೀತಿಸಿ. ಉತ್ತಮ ಆರೋಗ್ಯ ಎಲ್ಲರಿಗೂ ಇರುತ್ತದೆ. ಆದರೆ ,ಮಾನಸಿಕ ಆರೋಗ್ಯ ಎಲ್ಲರಿಗೂ ಇರುವುದಿಲ್ಲ. ಗಂಡುಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಒತ್ತಡ ನಿರ್ವಹಣೆ ಶಕ್ತಿ ಹೆಚ್ಚಿರುತ್ತದೆ. ಹಂಚಿಕೊಳ್ಳುವ ಮನೋಭಾವ ಇರುತ್ತದೆ ಎಂದರು.

ಕುಲಸಚಿವ ಪ್ರೊ.ಆರ್.ಶಿವಪ್ಪ, ಸಮಾಜ ಕಾರ್ಯ ವಿಭಾಗದ ಅಧ್ಯಕ್ಷೆ ಡಾ.ಜ್ಯೋತಿ, ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಮಂಜುಪ್ರಸಾದ್ ಸೇರಿದಂತೆ ಇತರರು ಭಾಗವಹಿಸಿದ್ದರು.

Key words: Mental health – important – Mysore University –VC- G. Hemanth Kumar

ENGLISH SUMMARY…

Like physical health, mental health is also equally important: UoM VC
Mysuru, October 12, 2022 (www.justkannada.in): “Like physical health, mental health is also very important for human beings,” observed Prof. G. Hemanth Kumar, Vice-Chancellor, University of Mysore.
He participated in the special lecture program on ‘Stress Management’, held at the Crawford Hall auditorium, in the University of Mysore, organized by the Department of Social Work, in association with the Office of the District Mental Health Program Officer, Mysuru, as part of the World Mental Health Day celebration.
“The WHO is observing the Mental Health Day since 1992. The theme for this year is ‘Make mental health and well-being for all a global priority.’ Cases of mental ill-health are increasing during post-COVID times. Both physical and mental health are equally important to lead a balanced life,” he explained.
“Irrespective of age and community, about 350 million people across the world are suffering from stress-related problems. Depression is also a big problem. However, there are various types of treatments available for it today. But adoption of those treatments are difficult in several countries. In a few countries treatment of such problems are available only for lesser than 10% of the population. Study of mental health is vast and includes various aspects like direct and indirect mental health and procedures. According to the World Health Organisation (WHO) health means not just physical health, instead mental peace also,” he added.
Registrar Prof. R. Shivappa, Head of the Department of Social Works Dr. Jyothi, District Mental Health Officer Manjuprasad and others were present.
Keywords: Stress Management/ lecture program/ University of Mysore.