ಪ್ರಿಯಕರನ ಜೊತೆ ಮೂರು ಮಕ್ಕಳ ತಾಯಿ ಎಸ್ಕೇಪ್: ಪತಿಯ ಗೋಳಾಟ

ಬೆಂಗಳೂರು,ಸೆಪ್ಟಂಬರ್,5,2025 (www.justkannada.in): ಪತಿ ಮತ್ತು ಮೂವರು ಮಕ್ಕಳನ್ನ ಬಿಟ್ಟು ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಓಡಿ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಹೊರವಲಯದ ಅನೇಕಲ್ ಬಸವನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ಎಂಬುವವರ ಪತ್ನಿ ಲೀಲಾವತಿ ಪ್ರಿಯರಕನ ಜೊತೆ ಓಡಿ ಹೋಗಿದ್ದು, ಪತಿ ಮಂಜುನಾಥ್ ಗೋಳಾಡಿದ್ದಾರೆ.

11 ವರ್ಷದ ಹಿಂದೆ ಮಂಜುನಾಥ್ ಲೀಲಾವತಿ ಮದುವೆಯಾಗಿದ್ದು,  ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳಿದ್ದಾಳೆ. ಆದರೆ ಲೀಲಾವತಿ ಪರ ಪುರುಷರ ಜೊತೆ ಎಸ್ಕೇಪ್ ಆಗಿದ್ದಾಳೆ.

ಪ್ರಿಯಕರ ಸಂತು ಎಂಬಾತನ ಲೀಲಾವತಿ ಪರಾರಿಯಾಗಿದ್ದು, ಈ ಸಂಬಂಧ ಪತಿ ಮಂಜುನಾಥ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ಲೀಲಾವತಿ ಪ್ರಿಯಕರನ ಜೊತೆ ಬಂದು ನನಗೆ ನನ್ನ ಗಂಡ , ಮಕ್ಕಳು ಬೇಡ. ಪ್ರಿಯಕರ ಬೇಕು ಎಂದಿದ್ದಾಳೆ.

Key words:  Bangalore, Women, escapes, With, lover