ಮಕ್ಕಳಾಗಲಿಲ್ಲ ಎಂದು ಮಹಿಳೆ ಭೀಕರ ಕೊಲೆ : ಪತಿ, ಅತ್ತೆ, ಮಾವ ಅರೆಸ್ಟ್

ಚಿಕ್ಕೋಡಿ,ಮೇ,19,2025 (www.justkannada.in): ಮಕ್ಕಳಾಗಲಿಲ್ಲ ಎಂದು ಮಹಿಳೆಯನ್ನ ಭೀಕರ ಕೊಲೆ  ಮಾಡಿರುವ ಘಟನೆ ಅಥಣಿ ತಾಲೂಕಿನ ಮಲಬಾದ ಗ್ರಾಮದಲ್ಲಿ ನಡೆದಿದೆ.

ರೇಣುಕಾ ಸಂತೋಷ್ ಹೊನಕಾಂಡೆ (27) ಕೊಲೆಯಾದ ಮಹಿಳೆ. ಕೊಲೆಯಲ್ಲ ಬೈಕ್ ಅಪಘಾತವೆಂದು ಬಿಂಬಿಸಿಸಲು ಹೋದ ಈಕೆಯ ಪತಿ, ಅತ್ತೆ, ಮಾವನನ್ನು ಪೊಲೀಸರು ಬಂಧಿಸಿದ್ದಾರೆ.  ಪತಿ ಸಂತೋಷ ಹೊನಕಾಂಡೆ, ಮಾವ ಕಾಮಣ್ಣ, ಅತ್ತೆ ಜಯಶ್ರೀ ಬಂಧಿತರು.

ಮೊನ್ನೆ ತಡರಾತ್ರಿ ರೇಣುಕಾರನ್ನು ಬೈಕ್ ಮೇಲೆ ಕರೆದೋಯ್ದು ಕಲ್ಲಿನಿಂದ ಜಜ್ಜಿ, ಸೀರೆಯಿಂದ ಕತ್ತು ಹಿಚುಕಿ ಕೊಲೆ ಮಾಡಲಾಗಿದೆ.  ಬಳಿಕ ಬೈಕ್ ನಿಂದ ಶವ ಎಸೆದೊಯ್ದು ಬೈಕ್ ಮೇಲಿಂದ ಬಿದ್ದು ಸಾವು, ಬೈಕ್ ಚಕ್ರಕ್ಕೆ ಸೀರೆ ಸಿಲುಕಿ ಮಹಿಳೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿಸಲು ಪತಿ, ಮಾವ, ಅತ್ತೆ ಮಂದಾಗಿದ್ದರು.

ಆದರೆ ಪೊಲೀಸರಿಗೆ ಸಂಶಯ ಬಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮದುವೆಯಾಗಿ 5 ವರ್ಷ ಆದರೂ ಮಕ್ಕಳಾಗಲಿಲ್ಲ ಹಾಗೂ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Woman,  murdered, Husband, arrested