ಗಮನ ಸೆಳೆಯುತ್ತಿರುವ ಶೀತಲ್ ಶೆಟ್ಟಿ ‘ವಿಂಡೋ ಸೀಟ್’ ಹೀರೋ !

ಬೆಂಗಳೂರು, ಸೆಪ್ಟೆಂಬರ್ 25, 2020 (www.justkannada.in): ವಿಂಡೋ ಸೀಟ್ ಸಿನಿಮಾದ ಫಸ್ಟ್ ಲುಕ್ ವಿಡಿಯೋ ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.

ಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ರಿಲೀಸ್ ಆಗಿದೆ. ಶೀತಲ್ ಶೆಟ್ಟಿಗೆ ಇದು ಮೊದಲ ಸಿನಿಮಾವಾದ್ರು ಸಿನಿಪ್ರೇಕ್ಷಕರು ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ.
ಕುತೂಹಲ ಹುಟ್ಟಿಸಿದ ಈ ಸಿನಿಮಾ ಆ ನಂತರ ಸಿನಿಮಾ ಅಪ್ ಡೇಟ್ ಗಾಗಿ ಪ್ರೇಕ್ಷಕರು ಕಾಯುವಂತೆ ಮಾಡಿತ್ತು.

ಇದೀಗ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಿನಿಮಾ ಈ ರೇಂಜ್ ಗೆ ಇದ್ಯಾ ಅನ್ನೋ ಆಶ್ಚರ್ಯವನ್ನು ಉಂಟು ಮಾಡಿದೆ.
ಪ್ರಕೃತಿ ಸೌಂದರ್ಯ, ನಾಯಕನಿಗೆ ಕಾಣುವ ನಾಯಕಿಯ ಸುಂದರ ಮುಖ ಪ್ರೇಕ್ಷಕರ ಮನಸ್ಸನ್ನ ಕದ್ದಿದೆ.