ಹೆಚ್ಚು ಸಾಲ ತೆಗೆದುಕೊಳ್ಳುವುದು ಬೇಡ: ಅನಗತ್ಯ ಹುದ್ಧೆಗಳನ್ನ ರದ್ಧು ಮಾಡಿ- ಸರ್ಕಾರಕ್ಕೆ ಸಿದ್ಧರಾಮಯ್ಯ ಸಲಹೆ…

ಬೆಂಗಳೂರು,ಸೆಪ್ಟಂಬರ್,25,2020(www.justkannada.in): ರಾಜ್ಯದ ಹಿತದೃಷ್ಠಿಯಿಂದ ಹೆಚ್ಚಿನ ಸಾಲ ತೆಗೆದುಕೊಳ್ಳುವುದು ಬೇಡ. ಅನಗತ್ಯ ಹುದ್ಧೆಗಳನ್ನು ರದ್ಧು ಮಾಡಿ. ಅನಗತ್ಯ ಸೌಲಭ್ಯವನ್ನು ಕಡಿತ ಮಾಡಬೇಕು ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ.jk-logo-justkannada-logo

ವಿಧಾನಸಭೆಯಲ್ಲಿ ಇಂದು ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಸಾಲ ಸಿಗುತ್ತೆ  ಅಂತಾ ಸಾಲ ಪಡೆಯಲು ಮುಂದಾಗಬಾರದು. ಅನಗತ್ಯ ಹುದ್ಧೆಗಳನ್ನು ರದ್ಧು ಮಾಡಬೇಕು. ಅಧಿಕಾರಿಗಳು ಅನಗತ್ಯ ಸೌಲಭ್ಯ ಕಡಿತ ಮಾಡಬೇಕು. ಪೊಲೀಸರು ಸೇರಿದಂತೆ ಅಧಿಕಾರಿಗಳು ಅನಗತ್ಯ ವೆಚ್ಚ ಕಡಿತಕ್ಕೆ ಮುಂದಾಗಬೇಕು.  ರಾಜ್ಯದ ಹಿತದೃಷ್ಠಿಯಿಂದ ಸಾಲದ ಪ್ರಮಾಣ ಏರಿಕೆ ಬೇಡ. ಸಾಲತೆಗೆದುಕೊಂಡರೇ ತೀರಿಸುವ ತಾಕತ್ತು ಇರಬೇಕು. ಹೀಗಾಗಿ ಹೆಚ್ಚು ಸಾಲ ತೆಗೆದುಕೊಳ್ಳುವುದು ಬೇಡ ಎಂದು ತಿಳಿಸಿದರು.cancel-unnecessary-post-facality-session-opposite-party-leader-siddaramaiah-advice

ಹಾಗೆಯೇ ಕೇಂದ್ರ ಸರ್ಕಾರ ಜಿ,ಎಸ್ ಟಿ ಪರಿಹಾರ ನೀಡಲೇಬೇಕು.  ಸಾಲಮಾಡಿಯಾದರೂ ಸರಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್ ಟಿ ಪರಿಹಾರ ನೀಡಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

Key words:  Cancel Unnecessary –post- facality-session- opposite party leader-siddaramaiah -advice