“ಕಾಡಾನೆ ದಾಳಿ, ಕೂಲಿ ಕಾರ್ಮಿಕ ಬಲಿ”

ಮೈಸೂರು,ಫೆಬ್ರವರಿ,07,2021(www.justkannada,in) : ಜಿಲ್ಲೆಯ ಸರಗೂರು ತಾಲ್ಲೂಕಿನ ಹಳೆಹೆಗ್ಗುಡಿಲು ಗ್ರಾಮದ ಹೊರವಲಯದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.jk

ಜೋಯಿ(45)ಮೃತ ದುರ್ದೈವಿ. ಆನೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಜೋಯಿ ಕೇರಳದವರ ಶುಂಠಿ ಗುತ್ತಿಗೆ ಭೂಮಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಇಂದು ಮುಂಜಾನೆ ಜಮೀನಿನಲ್ಲಿ ಪ್ರತಕ್ಷಗೊಂಡ ಕಾಡಾನೆಯಿಂದ ತಪ್ಪಿಸಿಕೊಳ್ಳುವಾಗ ಈ ಅವಘಡ ಸಂಭವಿಸಿದೆ.wild-elephant-Attack-Wage-labor-Death

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲೇ ಇರುವ ಆನೆ ಹಿಮ್ಮಟ್ಟಿಸುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ಪ್ರಕರಣವು ಸರಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

key words : wild-elephant-Attack-Wage-labor-Death