ಪತ್ನಿ ಬೇರೆಯಾದ ನಂತರವೂ ದೈಹಿಕ ಸಂಪರ್ಕ: ಪತಿ ವಿರುದ್ದ ಕೇಸ್ ರದ್ದಿಗೆ ಹೈಕೋರ್ಟ್ ನಕಾರ

ಬೆಂಗಳೂರು,ಏಪ್ರಿಲ್,8,2026 (www.justkannada.in): ಪತ್ನಿ ಬೇರೆಯಾದ ನಂತರವೂ ದೈಹಿಕ ಸಂಪರ್ಕ ಬೆಳೆಸಿದ ಹಿನ್ನೆಲೆಯಲ್ಲಿ ಪತ್ನಿ ದಾಖಲಿಸಿದ್ದ ಪ್ರಕರಣವನ್ನ ರದ್ದುಗೊಳಿಸುವಂತೆ ಕೋರಿದ್ದ ಪತಿಯ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಸಾಂಸಾರಿಕ  ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ  2019ರಿಂದ ಪತಿ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.  ಆದರೂ 2021ರಲ್ಲಿ ಪತ್ನಿ ಮನೆಗೆ ಬಂದಿದ್ದ  ಪತಿ ಒತ್ತಾಯದ ದೈಹಿಕ ಸಂಪರ್ಕ ಬೆಳಿಸಿದ್ದರು ಎಂದು ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಪತಿ ವಿರುದ್ದ ಪತ್ನಿ ಸೆಕ್ಷನ್   376ಬಿ ಅಡಿ ಪ್ರಕರಣ ದಾಖಲಿಸಿದ್ದರು.

ಪತ್ನಿ ದಾಖಲಿಸಿದ್ದ ಕೇಸ್ ರದ್ದುಪಡಿಸುವಂತೆ  ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.   ಪತ್ನಿಯೇ ರಾಜಿ ಸಂಧಾನಕ್ಕೆಂದು ಮನೆಗೆ ಆಹ್ವಾನಿಸಿದ್ದರು. ಅಂದು ಪತ್ನಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿಲ್ಲವೆಂದು ಪತಿ ಪರ ವಕೀಲರು ವಾದಿಸಿದರು.

ಈ ನಡುವೆ ಪತಿಯ ವಿರುದ್ದ ಹೈಕೋರ್ಟ್ ನಲ್ಲಿ ಪತ್ನಿಯೇ ಸ್ವತಃ ವಾದ ಮಂಡಿಸಿದ್ದರು ಎನ್ನಲಾಗಿದೆ. ಪತಿ ವಿರುದ್ದದ ಪ್ರಕರಣ ರದ್ದುಪಡಿಸಲು ನಿರಾಕರಿಸಿದ  ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ಅರ್ಜಿಯನ್ನ ವಜಾಗೊಳಿಸಿದೆ.

Key words: Wife, High Court, refuses, quash, case, against, husband