Tuesday, August 25, 2026

BDA Apartments

Home Front Page ಮಲ್ಲಿಕಾರ್ಜುನ ಖರ್ಗೆ ಬಳಿ ಕೂಡಲೇ ಕ್ಷಮೆ ಕೇಳಿ: ಅಸ್ಸಾಂ ಸಿಎಂಗೆ ಡಿಸಿಎಂ ಡಿಕೆಶಿ ಆಗ್ರಹ

ಮಲ್ಲಿಕಾರ್ಜುನ ಖರ್ಗೆ ಬಳಿ ಕೂಡಲೇ ಕ್ಷಮೆ ಕೇಳಿ: ಅಸ್ಸಾಂ ಸಿಎಂಗೆ ಡಿಸಿಎಂ ಡಿಕೆಶಿ ಆಗ್ರಹ

ಬೆಂಗಳೂರು,ಏಪ್ರಿಲ್,8,2026 (www.justkannada.in): ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ನೀಡುವ ಅವಹೇಳನಕಾರಿ ಹೇಳಿಕೆ ಖಂಡನೀಯ. ಕೂಡಲೇ ಕ್ಷಮೆಯಾಚಿಸಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ  ಅವಹೇಳನಕಾರಿ ಹೇಳಿಕೆ ತೀವ್ರವಾಗಿ ಖಂಡಿಸುತ್ತೇನೆ.  ದಶಕಗಳ ಕಾಲ ಸಾರ್ವಜನಿಕ ಜೀವನಕ್ಕೆ ಸಮರ್ಪಿಸಿಕೊಂಡ ನಾಯಕ  ಮಲ್ಲಿಕಾರ್ಜುನ ಖರ್ಗೆ.  ಎಐಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ಸ್ಥಾನದಲ್ಲಿದ್ದಾರೆ ಈ ಸ್ಥಾನವನ್ನು ಒಮ್ಮೆ ಮಹಾತ್ಮ ಗಾಂಧೀಜಿ ವಹಿಸಿದ್ದರು.

ಗೌರವಾನ್ವಿತ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಈ ರೀತಿ ಭಾಷೆ ಬಳಕೆ ಖಂಡನೀಯ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ತಕ್ಷಣ  ಕ್ಷಮೆಯಾಚಿಸಲಿ ಎಂದು  ಡಿಸಿಎಂ ಡಿಕೆ ಶಿವಕುಮಾರ್  ಒತ್ತಾಯಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಟೀಕಿಸಿದ್ದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ  ಅವರು, ಖರ್ಗೆ ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದಿದ್ದರು ಎನ್ನಲಾಗಿದೆ.

Key words: DCM, DK Shivakumar, Assam CM, iapologize, Mallikarjun Kharge