ಗಂಡನಿಂದಲೇ ಪತ್ನಿ ಮತ್ತು ಮಗುವಿನ ಹತ್ಯೆ:  ಆರೋಪಿ ಬಂಧನ.

ತುಮಕೂರು,ಅಕ್ಟೋಬರ್,19,2022(www.justkannada.in): ಕೌಟುಂಬಿಕ ಕಲಹ ಹಿನ್ನೆಲೆ ಪತಿಯೇ ತನ್ನ ಪತ್ನಿ ಮತ್ತು ಮಗುವನ್ನ ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕೊಂಡ್ಲಿಯ ಮಾವಿನಹಳ್ಳಿಯಲ್ಲಿ ಈ ಘಟನೆ ನಡೆದಿದೆ.  ಗ್ರಾಮದ ಸ್ವಾಮಿ ಎಂಬಾತನೇ ಈ ಕೃತ್ಯವೆಸಗಿರುವುದು. ಆತನ ಪತ್ನಿ ಕವಿತಾ(24) ಹಾಗೂ 3 ವರ್ಷದ ಮಗು ಹತ್ಯೆಯಾದವರು.

ಆರೋಪಿ ಸ್ವಾಮಿ ಹಾರೆಯಿಂದ ಪತ್ನಿ ಕವಿತ ಮತ್ತು ಮಗುವಿಗೆ ಹೊಡೆದು ಹತ್ಯೆಗೈದಿದ್ದಾನೆ. ಬಳಿಕ ಆತನನ್ನ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Key words: Wife – child –murder- husband-Accused- arrested.