ದಲಿತರು ಸಂಕಷ್ಟದಲ್ಲಿದ್ಧರೆ ಅದಕ್ಕೆ ಕಾಂಗ್ರೆಸ್ ಕಾರಣ- ಸಿಎಂ ಬೊಮ್ಮಾಯಿ ಆರೋಪ.

ಬೀದರ್,ಅಕ್ಟೋಬರ್,18,2022(www.justkannada.in): ದಲಿತರು ಸಂಕಷ್ಟದಲ್ಲಿದ್ಧರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು  ಸಿಎಂ ಬಸವರಾಜ ಬೊಮ್ಮಾಯಿ ಆರೋಪ ಮಾಡಿದರು.

ಬೀದರ್ ನ ಹುಮ್ನಾಬಾದ್ ನಲ್ಲಿ ನಡೆದ ಜನಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, 50 ವರ್ಷದಿಂದ ಮೀಸಲಾತಿ ಪ್ರಮಾಣ ಹೆಚ್ಚಳದ ಬೇಡಿಕೆ ಇತ್ತು.  ದಲಿತರನ್ನ ಕಾಂಗ್ರೆಸ್ ವೋಟ್ ಬ್ಯಾಂಕ್ ಮಾಡಿಕೊಂಡರು.  ಕಾಂಗ್ರೆಸ್ ನವರು ಒಂದು ಸುಳ್ಳನ್ನ ಹಲವು ಬಾರಿ ಹೇಳುತ್ತಿದ್ದಾರೆ . ಸುಳ್ಳನ್ನ ಹೇಳಿ ಕಾಂಗ್ರೆಸ್ ಅಧಿಕಾರ ಅನುಭವಿಸುತ್ತಾ ಬಂದಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತರ ಸಂಕಷ್ಟ ಕೇಳಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು  ಎಂದು ಕಿಡಿಕಾರಿದರು.

ಹಿಂದುಳಿದ ವರ್ಗಕ್ಕೆ ಸಿದ್ಧರಾಮಯ್ಯ ಏನು ಮಾಡಿದರು. ಕಾಗೀನೆಲೆ ಅಭಿವೃದ್ಧಿ ಮಾಡಿದ್ದು ಬಿಎಸ್ ವೈ. ಸರ್ಕಾರ.  ಸಾಮಾಜಿಕ ನ್ಯಾಯಾ ಅನ್ನೋದು ಬರೀ  ಸಿದ್ಧರಾಮಯ್ಯ ಅವರ ಬಾಯಿ ಮಾತಿನಲ್ಲಿ ಮಾತ್ರ ಎಂದು ಟೀಕಿಸಿದರು.

Key words: Dalits – trouble-because – Congress-CM-Bommai