Sunday, August 23, 2026

BDA Apartments

Home Front Page ಇದ್ದಕ್ಕಿದಂತೆ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್’ಶಿಪ್’ಗೆ ಕೊಹ್ಲಿ ಗುಡ್ ಬಾಯ್ ಹೇಳಿದ್ದೇಕೆ…?!

ಇದ್ದಕ್ಕಿದಂತೆ ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್’ಶಿಪ್’ಗೆ ಕೊಹ್ಲಿ ಗುಡ್ ಬಾಯ್ ಹೇಳಿದ್ದೇಕೆ…?!

ಬೆಂಗಳೂರು, ಜನವರಿ 16, 2022 (www.justkannada.in): ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ಶನಿವಾರ ಸಂಜೆ ದಿಢೀರ್ ರಾಜೀನಾಮೆ ಸಲ್ಲಿಸಿದ್ದಾರೆ.

ಕಳೆದ ವರ್ಷ ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿದ್ದ ಕೊಹ್ಲಿ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ಏಕದಿನ ತಂಡದ ನಾಯಕತ್ವದಿಂದ ವಜಾಗೊಂಡಿದ್ದರು.

ಇದೀಗ ಟೆಸ್ಟ್ ತಂಡದ ನಾಯಕತ್ವವನ್ನೂ ತ್ಯಜಿಸುವುದರೊಂದಿಗೆ ಟೀಮ್ ಇಂಡಿಯಾದಲ್ಲಿ ಕಳೆದ 7 ವರ್ಷಗಳ ವಿರಾಟ್ ಕೊಹ್ಲಿ ನಾಯಕತ್ವ ಅಧ್ಯಾಯಕ್ಕೆ ಸಂಪೂರ್ಣ ತೆರೆಬಿದ್ದಂತಾಗಿದೆ.

33 ವರ್ಷದ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪದತ್ಯಾಗದ ನಿರ್ಧಾರವನ್ನು ಪ್ರಕಟಿಸಿದ್ದು, ಅವರಿಗೆ ಧನ್ಯವಾದ ಹೇಳುವ ಮೂಲಕ ಬಿಸಿಸಿಐ ಕೂಡ ಅದನ್ನು ಅಂಗೀಕರಿಸಿದೆ.

ಬಿಸಿಸಿಐ ಜತೆಗಿನ ತಮ್ಮ ಸಂಬಂಧ ಹಳಸಿರುವ ಸಮಯದಲ್ಲೇ ಕೊಹ್ಲಿ ಈ ದಿಢೀರ್ ನಿರ್ಧಾರ ಪ್ರಕಟಿಸಿರುವುದು ಹಲವಾರು ಅನುಮಾನ ಮತ್ತು ಗೊಂದಲಗಳಿಗೂ ಕಾರಣವಾಗಿದೆ.