ಧನುಷ್-ಐಶ್ಚರ್ಯಾ ವಿಚ್ಛೇದನಕ್ಕೆ ‘ಡೇಟಿಂಗ್’ ಕಾರಣವೇ…?!

ಬೆಂಗಳೂರು, ಜನವರಿ 19, 2021 (www.justkannada.in): ನಟ ಧನುಷ್ ಮತ್ತು ಐಶ್ಚರ್ಯಾ ರಜನಿಕಾಂತ್ 18 ವರ್ಷಗಳ ವೈವಾಹಿಕ ಜೀವನ ಮುರಿದು ಬೀಳಲು ಕಾರಣ ಏನು ಎಂಬ ಬಗ್ಗೆಯೂ ಕುತೂಹಲ ಮೂಡಿದೆ.

18 ವರ್ಷಗಳ ವೈವಾಹಿಕ ಜೀವನವನ್ನು ವಿಚ್ಛೇದನ ಮೂಲಕ ಕೊನೆಗಾಣಿಸಲು ನಿರ್ಧರಿಸಿರುವುದಾಗಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು.

ಐಶ್ವರ್ಯಾ ರಜಿನಿಕಾಂತ್ 2012 ರ ಚಲನಚಿತ್ರ, 3 ಎಂಬ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಮಾಜಿ ಪತಿ ಧನುಷ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ನಟಿ ತ್ರಿಶಾ ಜೊತೆ ಧನುಷ್ ಸಂಬಂಧ ಹೊಂದಿದ್ದರು, ಡೇಟಿಂಗ್ ಮಾಡುತ್ತಿದ್ದರು ನಟಿ ಹಾಗೂ ಗಾಯಕಿ ಸುಚಿತ್ರಾ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಇದರಲ್ಲಿ ತ್ರಿಶಾ ಮತ್ತು ಧನುಷ್ ಅವರ ಸೆಲ್ಫಿ ಫೋಟೋ ಅಪ್‌ಲೋಡ್ ಮಾಡಿದ್ದರು. ಈ ಎಲ್ಲ ಕಾರಣಗಳಿಂದ ಐಶ್ಚರ್ಯಾ ವಿಚ್ಛೇದನಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.