ನಟಿ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್’ಗೆ ಫಿದಾ ಆದ ಫ್ಯಾನ್ಸ್ !

ಬೆಂಗಳೂರು, ಜನವರಿ 19, 2021 (www.justkannada.in): ನಟಿ ರಾಧಿಕಾ ಕುಮಾರಸ್ವಾಮಿ ಅವರು ಡ್ಯಾನ್ಸ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೀರಲ್ ಆಗಿದೆ.

ಕಪ್ಪು ಬಣ್ಣದ ಗೌನ್‌ ತೊಟ್ಟು ಹಿಂದಿಯ ‘ಮೇರ ಯಾರ್’ ಹಾಡಿಗೆ ಹೆಜ್ಜೆ ಹಾಕಿರುವ ರಾಧಿಕಾ ಅವರ ಈ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ರಾಧಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ್ಗೆ ವಿಡಿಯೋ, ಪೋಟೋಗಳನ್ನು ಹಾಕಿ ರಂಜಿಸುತ್ತಿರುತ್ತಾರೆ. ಇದೀಗ ಪೋಸ್ಟ್ ಮಾಡಿರುವ ವಿಡೀಯೋ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಅವರಿಗೆ ಅಭಿನಯ ಮಾತ್ರ ಅಲ್ಲ, ಡಾನ್ಸ್‌ನಲ್ಲೂ ಅಷ್ಟೇ ಆಸಕ್ತಿ ಇದೆ. ಇದೀಗ ಅರೆಯದ ಹುಡುಗಿರು ಕೂಡ ನಾಚುವಂತೆ ಡಾನ್ಸ್ ಮಾಡಿದ್ದಾರೆ. ಅವರ ಎನರ್ಜಿ ಕಂಡು ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.