ಕೊಹ್ಲಿ -ಅನುಷ್ಕಾಗೆ ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮ!

ಮುಂಬೈ, ಡಿಸೆಂಬರ್ 11, 2020 (www.justkannada.in): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ.

ಮದುವೆ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ವಿರಾಟ್ ಕೊಹ್ಲಿ ‘ಮೂರು ವರ್ಷಗಳು ಮತ್ತು ಜೀವನ ಪೂರ್ತಿ ಜತೆಯಾಗಿರುತ್ತೇವೆ’ ಎಂದು ಪ್ರೀತಿಯಿಂದ ಸಂದೇಶ ಬರೆದಿದ್ದಾರೆ.

ವಿರುಷ್ಕಾ ದಂಪತಿ ಸದ್ಯದಲ್ಲೇ ಮೊದಲ ಮಗುವಿಗೆ ಪೋಷಕರಾಗಲಿದ್ದಾರೆ. ಅನುಷ್ಕಾಗೆ ಮುಂದಿನ ತಿಂಗಳು ಡೆಲಿವರಿಯಾಗಲಿದೆ.