ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಸಿದ ‘ಪೆಟ್ರೋಮ್ಯಾಕ್ಸ್’ ಟೀಂ

ಬೆಂಗಳೂರು, ಡಿಸೆಂಬರ್ 11, 2020 (www.justkannada.in): ಹರಿಪ್ರಿಯಾ ಮತ್ತು ನೀನಾಸಂ ಸತೀಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಪೆಟ್ರೋಮ್ಯಾಕ್ಸ್ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.

ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಮೂಲಕ ಚಿತ್ರೀಕರಣ ಮುಗಿದು ಎರಡನೇ ಹಂತಕ್ಕೆ ಕಾಲಿಟ್ಟಿದೆ.

ಎರಡನೇ ಹಾಗೂ ಅಂತಿಮ ಹಂತದ ಚಿತ್ರೀಕರಣವಾಗಿದ್ದು, ಇದು ಮುಗಿದ ತಕ್ಷಣ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿಕೊಂಡು ಸಿನಿಮಾ ತೆರೆಗೆ ಬರಲಿದೆ ಎಂದು ನಿರ್ದೇಶಕ ವಿಜಯ ಪ್ರಸಾದ್ ಮಾಹಿತಿ ನೀಡಿದ್ದಾರೆ.