Saturday, August 15, 2026

BDA Apartments

Home Front Page ಡಿಕೆ ಶಿವಕುಮಾರ್ ಜತೆ  ನಾವು ಮತ್ತು ಇಡೀ ಪಕ್ಷ ನಿಲ್ಲಲಿದೆ- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಡಿಕೆ ಶಿವಕುಮಾರ್ ಜತೆ  ನಾವು ಮತ್ತು ಇಡೀ ಪಕ್ಷ ನಿಲ್ಲಲಿದೆ- ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಯ….

ನವದೆಹಲಿ,ಸೆ,5,2019(www.justkannada.in): ಇಡಿಯಿಂದ ಬಂಧಿತರಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಜೊತೆ ನಾವು ಹಾಗೂ ಇಡೀ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ.

ಗುರುವಾರ ಸಂಸದ ಡಿಕೆ ಸುರೇಶ್ ಅವರಿಗೆ ಕರೆ ಮಾಡಿ ಡಿ. ಕೆ ಶಿವಕುಮಾರ್ ಅವರ ಬಗ್ಗೆ ಸೋನಿಯಾ ಗಾಂಧಿ ವಿಚಾರಿಸಿದರು. ಡಿಕೆ ಶಿವಕುಮಾರ್ ಅವರ ಆರೋಗ್ಯ ಹೇಗಿದೆ. ಅವರ ಮಾನಸಿಕ ಸ್ಥಿತಿ ಹೇಗಿದೆ ಎಂದು ವಿಚಾರಿಸಿದರು.

ಸುಮಾರು ಮೂರು ನಿಮಿಷಗಳ ಕಾಲ ಮಾತನಾಡಿದ ಸೋನಿಯಾ ಗಾಂಧಿ ಅವರು ‘ಬಿಜೆಪಿ ವಿರೋಧ ಪಕ್ಷಗಳ ನಾಯಕರನ್ನು ಮಟ್ಟಹಾಕಲು ದ್ವೇಷದ ರಾಜಕಾರಣ ಮಾಡುತ್ತಿದೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಧೈರ್ಯ ಕಳೆದುಕೊಳ್ಳುವುದು ಬೇಡ. ಈ ಸಮಯದಲಿ ನಾವೆಲ್ಲರು ಅವರ ಜತೆ ಇದ್ದೇವೆ’ ಎಂದು ಸುರೇಶ್ ಅವರಿಗೆ ಹೇಳಿದ್ದಾರೆ.

Key words: We – stand- with -DK Sivakumar-Congress President- Sonia Gandhi