Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಸಿದ್ಧರಾಮಯ್ಯಗೆ ನಾವು ಕರೆ ಮಾಡಿ ಸಂಪರ್ಕಿಸಿಲ್ಲ- ಅತೃಪ್ತ ಶಾಸಕರಿಂದ ಸ್ಪಷ್ಟನೆ…

ಸಿದ್ಧರಾಮಯ್ಯಗೆ ನಾವು ಕರೆ ಮಾಡಿ ಸಂಪರ್ಕಿಸಿಲ್ಲ- ಅತೃಪ್ತ ಶಾಸಕರಿಂದ ಸ್ಪಷ್ಟನೆ…

ಮುಂಬೈ,ಜು,27,2019(www.justkannada.in):  ಕೆಲ ಅತೃಪ್ತ ಶಾಸಕರು ನಮ್ಮನ್ನ ಸಂಪರ್ಕಿಸಿದ್ದು ನಿಜ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅತೃಪ್ತ ಶಾಸಕರು ನಾವು ಸಿದ್ದರಾಮಯ್ಯಗೆ ಕರೆ ಮಾಡಿ ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಿ.ಸಿ ಪಾಟೀಲ್, ಸುಳ್ಳು ಕಥೆ ಕಟ್ಟಿ ನಮ್ಮ ನಡುವಿನ ಒಗ್ಗಟ್ಟು ಒಡೆಯಲು ಯತ್ನಿಸಲಾಗುತ್ತಿದೆ. ಸಿದ್ದರಾಮಯ್ಯಗೆ ನಾವು ಕರೆ ಮಾಡಿಲ್ಲ. ರಾಜೀನಾಮೆ ಕೊಟ್ಟಿದ್ದೇವೆ. ನಾವ್ಯಾಕೆ ಕರೆ ಮಾಡಲಿ. ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯಲ್ಲ. ಇನ್ನು ಉಪಚುನಾವಣೆ ಬಂದ್ರೆ ಕ್ಷೇತ್ರದ ಮತದಾರರು ನಿರ್ಧರಿಸುತ್ತಾರೆ ಎಂದರು.

ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅತೃಪ್ತ ಶಾಸಕ ಎಂಟಿಬಿ ನಾಗರಾಜ್,  ನಾವು ಯಾರನ್ನು ಸಂಪರ್ಕ ಮಾಡಿಲ್ಲ.  ಹೆದರಿಸಲು ಬೆದರಿಸಲು ಈ ರೀತಿ ಹೇಳಿಕೆ ನೀಡಿದ್ದಾರೆ. ಅನರ್ಹ ಮಾಡುವುದಾಗಿ ಹೆದರಿಕೆ ಹಾಕಿದ್ದಾರೆ. ಆನರ್ಹತೆ ವಿರುದ್ದ ನಾವು ಕೋರ್ಟ್ ಗೆ ಹೋಗುತ್ತೇವೆ ಎಂದು ತಿಳಿಸಿದರು.

ಹಾಗೆಯೇ ಸಮ್ಮಿಶ್ರ ಸರ್ಕಾರದಲ್ಲಿನ ಸಮಸ್ಯೆಗಳಲ್ಲಿನ ಬಗ್ಗೆ ಸಿದ್ಧರಾಮಯ್ಯ ಬಳಿ ಹೇಳಿಕೊಂಡಿದ್ದವು. ಕ್ಷೇತ್ರದಲ್ಲಿ ಯಾವುದೇ ಕೆಲಸ ಆಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ಸಿದ್ದರಾಮಯ್ಯ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಾಗಿ ರಾಜೀನಾಮೆ ನೀಡಿದ್ದೇವೆ ಎಂದರು.

ಅದೇ ರೀತಿ ಮತ್ತೊಬ್ಬ ಅತೃಪ್ತ ಶಾಸಕ ಮುನಿರತ್ನ ಅವರು ಮಾತನಾಡಿ, ನಾನು ಬೆಂಗಳೂರಿನಲ್ಲಿದ್ದಾಗ ಸಂಪರ್ಕಿಸಿದ್ದವು. ಆದರೆ ಬೆಂಗಳೂರಿನಿಂದ ಬಂದ ಮೇಲೆ ಯಾರನ್ನು ನಾವು ಸಂಪರ್ಕಿಸಿಲ್ಲ. ಕಾಂಗ್ರೆಸ್ ನಾಯಕರು ಮಾತನಾಡಲು ಬಂದಾಗ ಆಗಾಗಲೇ ಸಮಯ ಮೀರಿತ್ತು ಎಂದು ತಿಳಿಸಿದರು.

Key words: We -not – contacted- Siddaramaiah-Clarified –rebel MLA