ಹಸ್ತಕ್ಕೆ ಆಪರೇಷನ್ ಮಾಡಲು ನಮಗೂ ಗೊತ್ತು: ನಾವು ಕೊಟ್ರೆ ಕಾಂಗ್ರೆಸ್ ನವರು ಎದ್ದೇಳಲೂ ಆಗಲ್ಲ- ಸಿ.ಟಿ ರವಿ ಎಚ್ಚರಿಕೆ.

ಬೆಂಗಳೂರು,ಆಗಸ್ಟ್,19,2023(www.justkannada.in): ಕಾಂಗ್ರೆಸ್ ನವರು ಅಪರೇಷನ್ ಅಂತಾ ಕೈ ಹಾಕಿದ್ರೆ ನಾವು ಮುಟ್ಟಿನೋಡಿಕೊಳ್ಳಬೇಕು ಹಾಗೆ ಮಾಡುತ್ತೇವೆ.  ಹಸ್ತಕ್ಕೆ ಆಪರೇಷನ್ ಮಾಡಲು ನಮಗೂ ಗೊತ್ತು. ನಾವು ಕೊಟ್ರೆ ಕಾಂಗ್ರೆಸ್ ನವರು ಎದ್ದೇಳಲೂ ಆಗಲ್ಲ. ಹೀಗೆ ಎಚ್ಚರಿಕೆ ನೀಡಿದ್ದು ಮಾಜಿ ಸಚಿವ ಸಿ.ಟಿ ರವಿ.

ಬಿಜೆಪಿ ಶಾಸಕರನ್ನ ಕಾಂಗ್ರೆಸ್ ನಾಯಕರು ಸೆಳೆಯಲು ಯತ್ನಿಸಿದ್ದಾರೆಂಬ ಸುದ್ದಿ ಹಿನ್ನೆಲೆ ಈ ಕುರಿತು ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಬಿಜೆಪಿಯಿಂದ ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ಹಿರಿಯ ಸಚಿವರು, ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್​ ಗೆ ಆಗುತ್ತಿಲ್ಲ. ಅತಿರೇಕಕ್ಕೆ ಕೈ ಹಾಕಿದ್ರೆ ಮುಂದೆ ಏನು ಮಾಡಬೇಕೆಂದು ನಮಗೆ ಗೊತ್ತು ಎಂದರು.

ಶಾಸಕ ಎಸ್​.ಟಿ ಸೋಮಶೇಖರ್​ಗೆ ಪಕ್ಷ ಬಿಡುವ ಯೋಚನೆ ಇಲ್ಲ. ಎಸ್ ಟಿ ಸೋಮಶೇಖರ್ ಅವರ ಕೆಲವು ಬೆಂಬಲಿಗರನ್ನ ಸೆಳೆಯುಲು ಕಾಂಗ್ರೆಸ್ಸಿಗರು ಆಸೆ ತೋರಿಸಿದ್ದಾರೆ. ಪಕ್ಷ ಬಿಡುವ ಉದ್ದೇಶ ಎಸ್ ಟಿ ಸೋಮಶೇಖರ್ ಗೆ ಇಲ್ಲ ಎಂದರು.

ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ದಾರೆ ಅನುಭವಿಸಲಿ. ಅದು ಬಿಟ್ಟುಕಾಂಗ್ರೆಸ್ ಬೇರೆ ಏನಾದರೂ ಮಾಡಿದರೇ ಸುಮ್ಮನಿರಲ್ಲ ಹಸ್ತಕ್ಕೆ ಆಪರೇಷನ್ ಮಾಡೋದು ಗೊತ್ತು.  ಕಾಂಗ್ರಸ್ ನವರು ಎದ್ದೇಳಲೂ ಆಗಲ್ಲ ಎಂದು ಟಾಂಗ್ ನೀಡಿದರು.

Key words: We -also – operation hasta- CT Ravi- warn- Congress