ಪರಿಷತ್ ಗೆ ಮೂವರ ನಾಮನಿರ್ದೇಶನಕ್ಕೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್.

ಬೆಂಗಳೂರು,ಆಗಸ್ಟ್,19,2023(www.justkannada.in):  ವಿಧಾನಪರಿಷತ್ ಸ್ಥಾನಕ್ಕೆ ಮೂವರ ನಾಮ ನಿರ್ದೇಶನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ವಿಧಾನಪರಿಷತ್ ಸ್ಥಾನಕ್ಕೆ  ಹಿರಿಯ ನಟಿ ಮಾಜಿ ಸಚಿವೆ ಉಮಾಶ್ರೀ, ಕಾಂಗ್ರೆಸ್ ಮುಖಂಡ ಎಂ.ಆರ್ ಸೀತಾರಾಂ ಹಾಗೂ ಸುಧಾಮ್ ದಾಸ್ ಅವರನ್ನ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿತ್ತು. ಇದೀಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೂವರ ನಾಮನಿರ್ದೇಶನಕ್ಕೆ ಅನುಮೋದನೆ ನೀಡಿದ್ದಾರೆ.

ಈ ಮಧ್ಯೆ ಸುಧಾಮ್ ದಾಸ್ ಅವರನ್ನ ಪರಿಷತ್ ಗೆ ನಾಮ ನಿರ್ದೇಶನಕ್ಕೆ ವಿರೋಧಿಸಿ ಸಚಿವರಾದ ಕೆ.ಎಚ್ ಮುನಿಯಪ್ಪ, ಡಾ.ಜಿ.ಪರಮೇಶ್ವರ್, ಆರ್.ಬಿ ತಿಮ್ಮಾಪುರ್, ಹೆಚ್.ಸಿ ಮಹದೇವಪ್ಪ ಅವರು ಹೈಕಮಾಂಡ್ ಗೆ ಪತ್ರ ಬರೆದಿದ್ದರು. ಆದರೆ ನಾಲ್ವರು ಸಚಿವರ ಪತ್ರಕ್ಕೆ ಹೈಕಮಾಂಡ್ ಮನ್ನಣೆ ನೀಡಿಲ್ಲ ಎನ್ನಲಾಗಿದೆ.

Key words: legislative council- Green signal – Governor – nomination – three member