ಇಂಡಿಯಾ ಒಕ್ಕೂಟ ಒಪ್ಪಿಸಲು ತಮಿಳುನಾಡಿಗೆ ನೀರು :ಕಾಂಗ್ರೆಸ್ ಧೋರಣೆ ಖಂಡನೆ-ಕೆ.ಎಸ್ ಈಶ್ವರಪ್ಪ ವಾಗ್ದಾಳಿ.

ಶಿವಮೊಗ್ಗ,ಸೆಪ್ಟಂಬರ್,30,2023(www.justkannada.in):  INDIA ಒಕ್ಕೂಟ ಒಪ್ಪಿಸುವ ಸಲುವಾಗಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಧೋರಣೆಯನ್ನ ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಕರ್ನಾಟಕ ಜನ ಸತ್ತರೂ ಪರವಾಗಿಲ್ಲ ಇಂಡಿಯಾ ಒಪ್ಪಿಸಲು ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ. ಯಾವುದೇ ಸಿಎಂ ಇಷ್ಟೊಂದು ಅನ್ಯಾಯ ಮಾಡಿಲ್ಲ ಸಿಎಂ, ಡಿಸಿಎಂ ಕದ್ದುಮುಚ್ಚಿ ನೀರು ಬಿಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯನ್ನ ಸಮರ್ಥಿಸಿಕೊಂಡ ಕೆ.ಎಸ್ ಈಶ್ವರಪ್ಪ, ಶಾಸಕರಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. 6 ತಿಂಗಳಲ್ಲಿ ಸರ್ಕಾರ ಬೀಳೋದು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು.

ವರಿಷ್ಠರು ವಿಪಕ್ಷ ನಾಯಕನನ್ನ  ಆಯ್ಕೆ ಮಾಡ್ತಾರೆ. ರಾಜ್ಯ ಬಿಜೆಪಿ ನಾಯಕರಿಂದ ತಪ್ಪಾಗಿದ್ರೆ ಕ್ಷಮಿಸಿ. ಕೂಡಲೇ ವಿಪಕ್ಷ ನಾಯಕರನ್ನ ಆಯ್ಕೆ ಮಾಡಬೇಕು ಎಂದರು.

Key words: Water – Tamil Nadu – INDIA-Condemn- Congress -KS Eshwarappa