Sunday, September 20, 2026

BDA Apartments

ರಾಜ್ಯದ ಮೂವರು ಸಚಿವರು ಮತ್ತು ಓರ್ವ ಸ್ವಾಮೀಜಿಗೆ ಜೀವಬೆದರಿಕೆ ಪತ್ರ BDA JK_Adv BDA Adv
Home Crime ರಾಜ್ಯದ ಮೂವರು ಸಚಿವರು ಮತ್ತು ಓರ್ವ ಸ್ವಾಮೀಜಿಗೆ ಜೀವಬೆದರಿಕೆ ಪತ್ರ.

ರಾಜ್ಯದ ಮೂವರು ಸಚಿವರು ಮತ್ತು ಓರ್ವ ಸ್ವಾಮೀಜಿಗೆ ಜೀವಬೆದರಿಕೆ ಪತ್ರ.

ಬೆಳಗಾವಿ,ಸೆಪ್ಟಂಬರ್, 30,2023(www.justkannada.in):  ರಾಜ್ಯದ ಮೂವರು ಸಚಿವರು ಮತ್ತು ಸ್ವಾಮೀಜಿಯೊಬ್ಬರಿಗೆ ದುಷ್ಕರ್ಮಿಗಳು ಬೆದರಿಕೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀ, ಸಚಿವರಾದ ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್ ಮತ್ತು ಪ್ರೀಯಾಂಕ್ ಖರ್ಗೆ  ಸೇರಿ ಪ್ರಗತಿಪರರು ವಿಚಾರವಾದಿಗಳಿಗೆ ಜೀವ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ.ರಾಜ್ಯದ ಮೂವರು ಸಚಿವರು ಮತ್ತು ಓರ್ವ ಸ್ವಾಮೀಜಿಗೆ ಜೀವಬೆದರಿಕೆ ಪತ್ರ letter

ಕಳೆದ ತಿಂಗಳಷ್ಟೆ ನಿಜಗುಣಾನಂದ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬಂದಿತ್ತು. ಈಗ ಮತ್ತೆ ಅದೇ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರು ನಿಷ್ಕಲಮಂಟಪಕ್ಕೆ ಪತ್ರ ಬಂದಿದೆ. ನಿಜಗುಣಾನಂದ ನಾನು ಬರೆದಿರುವ ಪತ್ರ ಪ್ರೇಮ ಪತ್ರ ಅಂತಾದರೂ ತಿಳಿ.ಅಥವಾ ಸಾವಿನ ಪತ್ರವಂತಾದರೂ ತಿಳಿ, ನಾನು ನಿನ್ನ ಜತೆ ತಮಾಷೆ‌ ಮಾಡುತ್ತಿಲ್ಲ. ನೀನು ಆಯೋಜಿಸುವ ಪಾಪದ ಕಾರ್ಯಕ್ರಮದಲ್ಲೆ ನಿನ್ನ ಕಣ್ಣೆದುರಿಗೆ ನಿನ್ನ ಸಾವು ಬರುತ್ತೆ. ನೀನು ಮನುಷ್ಯ ರೂಪದಲ್ಲಿರುವ ರಾಕ್ಷಸ ಎಂದು ಪತ್ರದಲ್ಲಿ ದುಷ್ಕರ್ಮಿಗಳು ಬರೆದಿದ್ದಾರೆ. ಬೆದರಿಕೆ ಪತ್ರದಲ್ಲಿ ಮೂವರು ಸಚಿವರು ಸಾಹಿತಿಗಳ ಹೆಸರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

 

Key words: Three ministers – Swamiji  -threatening – letter