ಮೈಸೂರು,ಮೇ,2,2025 (www.justkannada.in): ಮೇ 5 ರಿಂದ ಮೂರು ದಿನಗಳ ಕಾಲ ಮೈಸೂರಿನ ಕೆಲ ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತು ಮೈಸೂರು ಮಹಾನಗರ ಪಾಲಿಕೆಯ ನೀರು ಸರಬರಾಜು ಮತ್ತು ಒಳಚರಂಡಿ, ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆ ಹೊರಡಿಸಿದ್ದಾರೆ. ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಬಿನಿ ನೀರು ಸರಬರಾಜು ಯೋಜನೆಯ ಮೂಲ ಸ್ಥಾವರದ ಉನ್ನತ್ತೀಕರಿಸುವ ಯೋಜನೆಯ ಭಾಗವಾಗಿ ಕೆಂಬಾಳು ಜಲಶುದ್ದೀಕರಣ ಘಟಕದಲ್ಲಿ ಹಾಲಿ ಇರುವ ಪ್ಯಾನಲ್ ಗಳನ್ನು ಬದಲಿಸಿ, ಹೊಸ ಇನ್ ಡೋರ್ ಪ್ಯಾನಲ್ ಗಳನ್ನು ಅಳವಡಿಸಲು ಹಾಗೂ ಪಿಂಜರಾಪೋಲ್ ಮಧ್ಯಂತರ ಯಂತ್ರಾಗಾರದಲ್ಲಿ ಹೆಚ್.ಟಿ. ಯಾರ್ಡ್ ನಲ್ಲಿ ಮೀಟರ್ ಕ್ಯುಬಿಕಲ್ ಅಳವಡಿಸುವ ಸಲುವಾಗಿ ದಿನಾಂಕ: 05/05/2025 ರಿಂದ 06/05/2025 ರವರೆಗೆ ಎರಡು ದಿನ ಕಾಮಗಾರಿಯನ್ನು ಕೈಗೊಳ್ಳುವ ಸಂಬಂಧ ಸಗಟು ನೀರನ್ನು ಪೂರ್ಣ ಪ್ರಮಾಣದಲ್ಲಿ ಮೈಸೂರು ನಗರಕ್ಕೆ ಪಂಪ್ ಮಾಡಲು ಸಾಧ್ಯವಾಗಿರುವುದಿಲ್ಲ. ಆದ ಕಾರಣ ದಿನಾಂಕ: 05/05/2025 ರಿಂದ 07/05/2025 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ನೀರನ್ನು ಸಂಗ್ರಹ ಮಾಡಿಕೊಂಡು, ಮಿತವಾಗಿ ಬಳಕೆ ಮಾಡಿ ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗುವ ಪ್ರದೇಶಗಳು ಈ ಕೆಳಕಂಡಂತಿದೆ.
ಕಬಿನಿ ಆಶ್ರಿತ ಪ್ರದೇಶಗಳು: ವಾರ್ಡ್ ನಂ-42 ರಿಂದ 51 (ಕೆ.ಜಿ.ಕೊಪ್ಪಲು, ಜನತಾನಗರ, ಶಾರದಾದೇವಿನಗರ, ದಟ್ಟಗಳ್ಳಿ 3ನೇ ಹಂತ, ಕುವೆಂಪುನಗರ, ಜಯನಗರ, ಲಕ್ಷ್ಮೀಪುರಂ, ಸುಣ್ಣದಕೇರಿ, ಅಗ್ರಹಾರ) ಹಾಗೂ 54 ರಿಂದ 65 (ಗುಂಡುರಾವ್ ನಗರ, ಚಾಮುಂಡಿಪುರಂ, ಕಷ್ಣಮೂರ್ತಿಪುರಂ, ಕುವೆಂಪುನಗರ ಸಿ.ಐ.ಟಿ.ಬಿ. ರಾಮಕೃಷ್ಣನಗರ, ಕುವೆಂಪುನಗರ ಎಂ ಬ್ಲಾಕ್, ಅಶೋಕಪುರಂ, ವಿದ್ಯಾರಣ್ಯಪುರಂ ಭಾಗಶಃ ಪ್ರದೇಶ, ವಿಶ್ವೇಶವರನಗರ, ಜೆ.ಪಿ.ನಗರ, ಅರವಿಂದನಗರ, ಶ್ರೀರಾಂಪುರ) ಹಾಗೂ ಇತ್ಯಾದಿ ಪ್ರದೇಶಗಳು.
Key words: Water, supply, disruption, Mysore , three days