Wednesday, September 30, 2026

BDA Apartments

ಸಿಂಧೂರಿ ವಿರುದ್ದ ಸಿಎಂಗೆ 10 ಅಂಶ ಉಲ್ಲೇಖಿಸಿ ಸಾರಾ ಪತ್ರ BDA JK_Adv BDA Adv
Home Front Page ಸಿಂಧೂರಿ ವಿರುದ್ದ ಸಿಎಂಗೆ 10 ಅಂಶ ಉಲ್ಲೇಖಿಸಿ ಸಾರಾ ಪತ್ರ

ಸಿಂಧೂರಿ ವಿರುದ್ದ ಸಿಎಂಗೆ 10 ಅಂಶ ಉಲ್ಲೇಖಿಸಿ ಸಾರಾ ಪತ್ರ

ಮೈಸೂರು, ಜೂನ್ 09, 2021 (www.justkannada.in):  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಶಾಸಕ ಸಾ.ರಾ.ಮಹೇಶ್ ಪತ್ರ ಬರೆದಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ ಮಾಡಿದ ಆರೋಪಗಳನ್ನು ಒಳಗೊಂಡ ಪತ್ರ ಬರೆದಿದ್ದೇನೆ.   10 ಅಂಶಗಳನ್ನು ಉಲ್ಲೇಖಿಸಿ ಪತ್ರ ಬರೆದಿದ್ದೇನೆ. ನಮ್ಮ ರಾಜ್ಯದ ದೇವಾಲಯಗಳು ಕುಸಿದು ಬೀಳುತ್ತಿದ್ದರೂ 200 ಕೋಟಿ ರೂ.ಗಳನ್ನು ಆಂಧ್ರಕ್ಕೆ ನೀಡಿದ್ದರು. 4G ವಿನಾಯಿತಿ ಅಡಿಯಲ್ಲಿ ಹಣ ಬಿಡುಗಡೆಯಾಗಿದೆ  ಎಂದು ಪತ್ರದಲ್ಲಿ ತಿಳಿಸಿದ್ದಾರೆ.

16 ಲಕ್ಷ ಹಣ ಬಳಸಿ ಪಾರಂಪರಿಕ ಕಟ್ಟಡದ ನವೀಕರಣ ಮಾಡಿದ್ದಾರೆ.  ಅದಾದ ನಂತರ ಈಜುಕೊಳ, ಜಿಮ್ ನಿರ್ಮಿಸಿದ್ದಾರೆ. ಈಜುಕೊಳಕ್ಕೆ ಕುಡಿಯುವ ನೀರು ಬಳಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಮನೆಯಲ್ಲಿ ಮೂರು ಕೆಇಬಿ ಮೀಟರ್ ಇವೆ. ಬೇರೆಯವರಿಗೆ 3- 4 ಸಾವಿರ ರೂ. ಬಿಲ್ ಬರುತ್ತೆ, ಹೆಚ್ಚೆಂದರೆ 7 ಸಾವಿರ ಬರಬಹುದು.

ದಿ ಗ್ರೇಟ್ ಸಿಂಗಂ, ದಕ್ಷ ಅಧಿಕಾರಿ ಅವರ ಮನೆಯಲ್ಲಿ ಒಂದು ತಿಂಗಳಿಗೆ 50 ಸಾವಿರ ಬಿಲ್ ಇದೆ. ಪಂಪ್ ಸೆಟ್‌ಗೆ ಎಷ್ಟು ಗಂಟೆ ಕರೆಂಟ್ ಕೊಡುತ್ತಿದ್ದೀರಿ ಹೇಳಿ? ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ? ಎಂದು ಸುದ್ದಿಗೋಷ್ಠಿಯಲ್ಲಿ ಶಾಸಕ ಸಾ.ರಾ.ಮಹೇಶ್ ಪ್ರಶ್ನಿಸಿದ್ದಾರೆ.