Wednesday, September 30, 2026

BDA Apartments

ಆಧಾರ್ ಮತ್ತು ಮತದಾರರ ಪಟ್ಟಿ ಜೋಡಣೆ: ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ...
Home Front Page ಆಧಾರ್ ಮತ್ತು ಮತದಾರರ ಪಟ್ಟಿ ಜೋಡಣೆ: ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

ಆಧಾರ್ ಮತ್ತು ಮತದಾರರ ಪಟ್ಟಿ ಜೋಡಣೆ: ಕೇಂದ್ರದಿಂದ ಮಹತ್ವದ ನಿರ್ಧಾರ ಸಾಧ್ಯತೆ

ಬೆಂಗಳೂರು, ಜೂನ್ 09, 2021 (www.justkannada.in): ಆಧಾರ್ ಮತ್ತು ಮತದಾರರ ಪಟ್ಟಿಯನ್ನು ಜೋಡಣೆ ಸಂಬಂಧ ಇಂದು ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

ಮತದಾರರ ಪಟ್ಟಿಯನ್ನು ಆಧಾರ್ ನೊಂದಿಗೆ ಜೋಡಣೆ ಮಾಡಲು ಮಹತ್ವದ ಚರ್ಚೆ ನಡೆದಿದೆ. ಹಲವೆಡೆ ಮತದಾರರ ಗುರುತಿನ ಚೀಟಿ ಪಡೆದುಕೊಳ್ಳಲು ಕಡಿವಾಣ ಹಾಕಬಹುದಾಗಿದೆ ಎನ್ನಲಾಗಿದೆ.

ಕೇಂದ್ರ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಚುನಾವಣೆ ಸುಧಾರಣೆಯ ಬಗ್ಗೆ ಕ್ರಮಕೈಗೊಳ್ಳಲು ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಮಾಣ ಪತ್ರದ ತಪ್ಪು ಮಾಹಿತಿಗೆ ಎರಡು ವರ್ಷ ಸಜೆ ಸೇರಿದಂತೆ ಹಲವು ವಿಚಾರಗಳು ಪ್ರಸ್ತಾವನೆಯಲ್ಲಿವೆ ಎನ್ನಲಾಗಿದೆ.

ಆಧಾರ್ ಮತ್ತು ಮತದಾರರ ಪಟ್ಟಿಯನ್ನು ಜೋಡಣೆ ಮಾಡುವುದರಿಂದ ಒಬ್ಬ ಮತದಾರ ವಿವಿಧೆಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದುವುದನ್ನು ತಪ್ಪಿಸಬಹುದು.