ಶೇ.30ರಷ್ಟು  ವೇತನ ಹೆಚ್ಚಳ ಸಾಧ್ಯವಿಲ್ಲ: ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ- ಡಿಸಿಎಂ ಲಕ್ಷ್ಮಣ್ ಸವದಿ…

ಹುಮ್ನಾಬಾದ್,ಏಪ್ರಿಲ್,8,2021(www.justkannada.in):  ಸಾರಿಗೆ ನೌಕರರ ಶೇ.30ರಷ್ಟು ವೇತನ ಹೆಚ್ಚಳ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.Illegally,Sand,carrying,Truck,Seized,arrest,driver

6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಬಿಗ್ ಶಾಕ್ ನೀಡಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ,  ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುವುದಾಗಿ  ಸಿಎಂ ಬಿಎಸ್ ವೈ ಅವರೇ ಹೇಳಿದ್ದಾರೆ. ಆದರೆ ಶೇ. 30 ರಷ್ಟು ವೇತನ ಹೆಚ್ಚಳ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ  ಎಂದು ಮನವಿ ಮಾಡಿದರು.Wages- cannot - increased - 30%- DCM -Laxman Savadi.

ಮುಷ್ಕರದಿಂದ ರಾಜ್ಯದಲ್ಲಿ ನಿನ್ನೆ ಒಂದೇ ದಿನ ಕೋಟ್ಯಾಂತರ ರೂ. ನಷ್ಟವಾಗಿದೆ. ನೀವೇ ಬ್ಯಾಲೆನ್ಸ್ ಶೀಟ್ ತರಿಸಿಕೊಂಡು ಆದಾಯದ ಲೆಕ್ಕ ಹಾಕಿ ಎಂದು ಸಾರಿಗೆ ನೌಕರರಿಗೆ ಲಕ್ಷ್ಮಣ ಸವದಿ  ತಿಳಿಸಿದರು.

Key words: Wages- cannot – increased – 30%- DCM -Laxman Savadi.