Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ನಾನು ಜೆಡಿಎಸ್ ಗೆ ಮತ ಹಾಕಿದ್ದೇನೆ: ಖಾಲಿ ಬ್ಯಾಲೆಟ್ ತೋರಿಸಿದ್ರೆ ರಾಜೀನಾಮೆ ನೀಡುವೆ- ಶಾಸಕ ಎಸ್.ಆರ್...

ನಾನು ಜೆಡಿಎಸ್ ಗೆ ಮತ ಹಾಕಿದ್ದೇನೆ: ಖಾಲಿ ಬ್ಯಾಲೆಟ್ ತೋರಿಸಿದ್ರೆ ರಾಜೀನಾಮೆ ನೀಡುವೆ- ಶಾಸಕ ಎಸ್.ಆರ್ ಶ್ರೀನಿವಾಸ್.

ಬೆಂಗಳೂರು,ಜೂನ್.10,2022(www.justkannada.in):  ಇಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ ಹಿನ್ನೆಲೆ ಈ ನಗ್ಗೆ ಸ್ವತಃ ಶಾಸಕ ಎಸ್.ಆರ್ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎಸ್.ಆರ್ ಶ್ರೀನಿವಾಸ್, ನಾನು ಜೆಡಿಎಸ್ ಗೆ ಮತ ಹಾಕಿದ್ದೇನೆ.  ನಾನು ಖಾಲಿ ಬ್ಯಾಲೆಟ್ ಪೇಪರ್ ಕೊಟ್ಟಿಲ್ಲ ಖಾಲಿ ಬ್ಯಾಲೆಟ್ ಹಾಕಿದ್ರೆ ನನಗೆ ಶಿಕ್ಷೆ ನೀಡಲಿ.  ಖಾಲಿ ಬ್ಯಾಲೆಟ್ ತೋರಿಸಿದ್ರೆ ಈಗಲೇ ರಾಜೀನಾಮೆ ನೀಡುವೆ ಎಂದು ತಿಳಿಸಿದ್ದಾರೆ.

ಶಾಸಕ ಶ್ರೀನಿವಾಸ್ ಗೌಡ ನಿವಾಸದ ಬಳಿ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ.

ಇನ್ನು ಅಡ್ಡಮತದಾನ ಮಾಡಿದ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಮನೆ ಮುಂಭಾಗ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜೀನಾಮೆ ನೀಡುವಂತೆ ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದರು. ಪ್ರತಿಭಟನೆ ಹಿನ್ನೆಲೆ ಶ್ರೀನಿವಾಸ್ ಗೌಡ ಮನೆ ಬಳಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

Key words: voted – JDS-empty -ballet –MLA- SR Srinivas.