ರಾಜ್ಯದಲ್ಲಿ ಮತ ಹಬ್ಬ: ಮತದಾರರ ಉತ್ಸಾಹ, ಹಕ್ಕು ಚಲಾಯಿಸುತ್ತಿರುವ ಸಿನಿ ತಾರೆಯರು!

ಬೆಂಗಳೂರು, ಮೇ 10, 2023 (www.justkannada.in): ವಿಧಾನಸಭೆ ಚುನಾವಣೆ ಮತದಾನ ದಿನವಾದ ಇಂದು ಮತದಾರರು ಬೆಳಗ್ಗಿನಿಂದಲೇ ಉತ್ಸಾಹದಿಂದ ಮತದಾನಕ್ಕೆ ಬರುತ್ತಿದ್ದಾರೆ.

ಹಲವು ರಾಜಕೀಯ, ಧಾರ್ಮಿಕ ಮುಖಂಡರು ಹಾಗೂ ಪ್ರಮುಖರು ಮತ ಚಲಾಯಿಸಿದ್ದಾರೆ. ಸಿನಿ ತಾರೆಯರು ಮತಗಟ್ಟೆಗೆ ಆಗಮಿಸಿ ಮತಚಲಾಯಿಸಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜತೆಗೆ ಇತರರಿಗೂ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ.

ಸಿದ್ದಲಿಂಗ ಸ್ವಾಮೀಜಿ, ಸಚಿವ ಸುಧಾಕರ್‌, ನಟ ಪ್ರಕಾಶ್ ರಾಜ್ , ರಮೇಶ್ ಅರವಿಂದ್, ನಟಿ ಮಿಲನಾ ನಾಗರಾಜ್, ನಟ ಜಗ್ಗೇಶ್ ದಂಪತಿ ಸೇರಿದಂತೆ ಹಲವರು ಮತದಾನ ಮಾಡಿದ್ದಾರೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಸರ್ಕಾರಿ ಕನ್ನಡ – ಆಂಗ್ಲ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮೊಮ್ಮಗನ ಜೊತೆ ಬಂದು ಅಜ್ಜಿ, 76 ವರ್ಷದ ಮೀನಾ ಬಾಯಿ ಮತಚಲಾಯಿಸಿದರು. ಮತದಾರರು ಕುಟುಂಬದವರು, ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.