ಕರ್ನಾಟಕ ವಿಧಾನಸಭೆ ಚುನಾವಣೆ: ‘ದಿಗ್ಗಜರ ಹಣೆ ಬರಹ’ ಇಂದು ನಿರ್ಧಾರ

ಬೆಂಗಳೂರು, ಮೇ 10, 2023 (www.justkannada.in): ಕರ್ನಾಟಕದಲ್ಲಿ ಮತದಾನ ಆರಂಭವಾಗಿದೆ. ಹಲವಾರು ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಜನ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಾಣಬಹುದು. ಇಂದು ನಡೆದಿರುವ ವಿಧಾನ ಸಭಾ ಚುನಾವಣೆಯಲ್ಲಿ ಹಲವು ದಿಗ್ಗಜರ ಚುನಾವಣಾ ಭವಿಷ್ಯ ವನ್ನು ಮತದಾರ ನಿರ್ಧಸಲಿದ್ದಾನೆ.

ಇದರಲ್ಲಿ ಪ್ರಮುಖರು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ( ಶಿಗ್ಗಾವಿ), ಮಾಜಿ ಮುಖ್ಯ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,(ಮೈಸೂರಿನ ವರುಣಾ),

ಬಿಜೆಪಿ ಮಾಡಿದ ಅಪಮಾನದ ವಿರುದ್ಧ ಸಿಡಿದೆದ್ದು ಕಾಂಗ್ರೆಸ್ ಸೇರಿದ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ( ಹುಬ್ಬಳ್ಳಿ- ದಾರವಾಡ ಕೇಂದ್ರ), ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (ಕನಕಪುರ),  ಬಿಜೆಪಿ ಗೆ ಗುಡ್ ಬೈ ಹೇಳಿ ಹಸ್ತದ ಗುರುತಿನ ಮೇಲೆ ಸ್ಪರ್ದಿಸಿರುವ ಲಕ್ಷ್ಮಣ ಸವದಿ (ಅಥಣಿ), ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ ಬಿ ಪಾಟೀಲ್ ( ಬಭಲೇಶ್ವರ),  ಕಳೆದ ಐದು ವರ್ಷಗಳಿಂದ ಬಿಜೆಪಿ ಗೆ ತಲೆ ಶೂಲೆಯಾಗಿದ್ದ ಮತ್ತು ವಿರೋಧ ಪಕ್ಷದ ವರಂತೆ ಆಡಳಿತ ಪಕ್ಷದ ವಿರುಧ್ದವೇ ಚಾಟಿ ಬೀಸಿ ಯಾವ ಶಿಸ್ತು ಕ್ರಮಕ್ಕೂ ಒಳಗಾಗದ ಬಸನಗೌಡ ಪಾಟೀಲ್ ಯತ್ನಾಳ ( ವಿಜಯಪುರ ನಗರ), ಮಾಜಿ ಸಚಿವ ಜ ಪರಮೇಶ್ವರ ( ಕೊರಟಗೆರೆ), ಸಚಿವ ಆರ್ ಆಶೋಕ್ ( ಪದ್ಮನಾಭ ನಗರ ಹಾಗೂ ಕನಕಪುರ), ಸಚಿವ ಸೋಮಣ್ಣ ( ವರುಣಾ ಮತ್ತು ಚಾಮರಾಜನಗರ)Persecuted-woman-Suitable-attending-SIT-Former CM- Siddaramaiah-advised

ಮಾಜಿ ಮುಖ್ಯ ಮಂತ್ರಿ ಹಾಗೂ ಜೆಡಿಎಸ್ ನ ಸ್ಟಾರ್ ಪ್ರಚಾರಕ ಕುಮಾರಸ್ವಾಮಿ (ಚನ್ನಪಟ್ಟಣ) ಇವರ ಪುತ್ರ ನಿಖಿಲ್ ಕುಮಾರಸ್ವಾಮಿ ( ರಾಮನಗರ) ಹಾಗೂ ಸಿ ಪಿ ಯೋಗೇಶ್ವರ್ (ಚನ್ನಪಟ್ಟಣ).

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ವಿ.ಸೋಮಣ್ಣ, ಆರ್.ಆಶೋಕ್, ಕುಮಾರಸ್ವಾಮಿ, ಯೋಗೇಶ್ವರ್, ನಿಖಿಲ್ ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್, ಜಗದೀಶ್ ಶೆಟ್ಡರ್, ಲಕ್ಷಣ ಸವದಿ, ರಮೇಶ್ ಜಾರಕಿಹೊಳಿ (ಗೋಕಾಕ್) ಈ ಚುನಾವಣೆ ಅಗ್ನಿ ಪರೀಕ್ಷೆ. ಸಿದ್ದರಾಮಯ್ಯ ನವರನ್ನು ಅವರ ತವರು ಕ್ಷೇತ್ರ ವರುಣಾ ದಲ್ಲಿ ಸೋಲಿಸಲೇಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹಠಕ್ಕೆ ಬಿದ್ದಿವೆ.

ಬಿಜೆಪಿ ಲಿಂಗಾಯತ ಮುಖಂಡ ವಿ ಸೋಮಣ್ಣ ಅವರನ್ನು ಬೆಂಗಳೂರು ನಗರದ ಗೋವಿಂದ ರಾಜ ನಗರದಿಂದ ಎತ್ತಂಗಡಿ ಮಾಡಿ, ವರುಣಾ ಮತ್ತು ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ.  ಲಿಂಗಾಯತ ಮತದಾರರೆ ಗಣನೀಯ ಸಂಖ್ಯೆಯಲ್ಲಿ ರುವ ವರುಣಾದಲ್ಲಿ, ಸೋಮಣ್ಣ ಗೆಲುವಿನ ಕನಸು ಕಾಣುತ್ತಿದ್ದಾರೆ. ಸೋಮಣ್ಣ ಆ ಕ್ಷೇತ್ರಕ್ಕೆ ಅನಾಮಿಕ. ಚಾಮರಾಜನಗರದಲ್ಲಿ ಸೋಮಣ್ಣ ನವರು ಬಿಜೆಪಿಯ ಬಂಡಾಯವನ್ನು ತಣಿಸಲಾಗಲಿಲ್ಲಾ, ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಯಲು ಸೋಮಣ್ಣ ಮಾಡಿದ ಆಮಿಷದ ತಂತ್ರ ಕೂಡ ಚುನಾವಣಾ ಆಯೋಗದ ಗಮನಕ್ಕೆ ಬಂದಿದ್ದು, ಇವರಿಗೆ ಇದು ಸಹ ಮುಳ್ಳಾಗಬಹುದು ಎಂದು ವ್ಯಾಖ್ಯಾನಿಸಲಾಗಿದೆ.

ಸೋಮಣ್ಣ ನವರಿಗೆ ಗೋವಿಂದ ರಾಜ ನಗರದ ಟಿಕೇಟ್ ತಪ್ಪಲು ಯಡಿಯೂರಪ್ಪ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಸೋಮಣ್ಣ ನವರ ರಾಜಕೀಯ ಭವಿಷ್ಯ ಮಂಕಾಗಿಸಲು ಅವರನ್ನು ಸಿದ್ದರಾಮಯ್ಯ ನವರ ವಿರುದ್ಧ ಕಣಕ್ಕಿಳಿಸಲಾಗಿದೆ ಎಂಬ ಅನುಮಾನಗಳೂ ಇವೆ.

ವಯಸ್ಸಿನ ಮಾನದಂಡ ಅನುಸರಿಸಿ ಬಿಜೆಪಿ ಯಡಿಯೂರಪ್ಪ ನವರನ್ನು ಮುಖ್ಯ ಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿ, ಅವರು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಚೇತ್ರವನ್ನು ಅವತ ಪುತ್ರ ಬಿ ವೈ ವಿಜಯೇಂದ್ರ ರವರಿಗೆ ನೀಡಿದೆ. ಒಳ ಮೀಸಲಾತಿಯಿಂದ ನಮಗೆ ಅನ್ಯಾಯವಾಗಿದೆ ಎಂದು ಬಂಜಾರ ಸಮುದಾಯ ಆಕ್ರೋಶ ವ್ಯಕ್ತ ಪಡಿಸುತ್ತಿದೆ. ಬಂಜಾರ ಸಮಯದಾಯದ ಮತಗಳು ಶಿಕಾರಿಪುರದಲ್ಲಿ ಗಣನೀಯ ಸಂಖ್ಯೆಯಲ್ಲಿವೆ.

ಇನ್ನು ಆರ್.ಅಶೋಕ್ ಒಂದು ರೀತಿಯಲ್ಲಿ ಅದೃಷ್ಟವಂತರೆ! ಅವರಿಗೆ ಅವರ ಕ್ಷೇತ್ರ ಪದ್ಮನಾಭ ನಗರ ಸಿಕ್ಕಿದೆ. ಜೊತೆಗೆ ಕನಕಪುರದ ಬಂಡೆ ಶಿವಕುಮಾರ್ ಮಣಿಸಲು ಕನಕಪುರದಿಂದಲೂ ಸ್ಪರ್ಧಿಸಲು ಪಕ್ಷ ಸೂಚಿಸಿದೆ. ಕನಕಪುರದಲ್ಲಿ ಶಿವಕುಮಾರ್ ರವರಿಗೆ ಅಶೋಕ್ ಸೋಲಿನ ರುಚಿ ತೋರುವರೊ? ಇಲ್ಲಾ ಅವರೇ ಸೋಲುವರೊ ಕಾದು ನೋಡಬೇಕು. ಕುಮಾರಸ್ವಾಮಿ ಮತ್ತು ಯೋಗೇಶ್ವರ್ ನಡುವೆ ಚೆನ್ನಪಟ್ಟಣದಲ್ಲಿ ಜಿದ್ದಾಜಿದ್ದಿಯೇ ನಡೆದಿದೆ. ಮತದಾರ ಯಾರಿಗೆ‌ ಜೈ ಎನ್ನುವನೊ?

ಇನ್ನು   ಯತ್ನಾಳ್ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಮಣಿಸಬೇಕಿದೆ. ವಿಜಾಪುರ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದು, ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ. ಈ ಚುನಾವಣೆ ಜಗದೀಶ್ ಶೆಟ್ಟರ್, ಮತ್ತು ಸವದಿಯವರ ರಾಜಕೀಯ ಭವಿಷ್ಯ ನಿರ್ಧರಿಸುತ್ತೆ.  ಅವರಿಬ್ಬರು ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗಿದೆ. ಅವರು ಗೆಲ್ಲುವುದರ ಜೊತೆಗೆ ಕಾಂಗ್ರೆಸ್ ಗೆ ಮತ್ತಷ್ಟು ಸೀಟು ಬರುವಂತೆ ಮಾಡುವ ಜವಾಬ್ದಾರಿ ಸಹ ಇವರ ಮೇಲಿದೆ.

ಬಿಜೆಪಿ ಈ ಚುನಾವಣೆಯನ್ನು ಧರ್ಮಾದಾರಿತ ಚುನಾಣೆಯನ್ನಾಗಿಸಲು ಹರ ಸಹಾಸ ಮಾಡಿದೆ. ಕಮಲ ಪಕ್ಷದ ಕಾರ್ಯ ತಂತ್ರ ಫಲಿಸುವುದೊ ಇಲ್ಲಾವೊ ಎಂಬುದು ಮೇ 13 ರಂದು ತಿಳಿಯಲಿದೆ. ಕಾಂಗ್ರೆಸ್ ಜೆಡಿಎಸ ಮೈತ್ರಿ ಸರ್ಕಾರದ ಪತನದ ರೂವಾರಿ  ರಮೇಶ್ ಜಾರಕಿಹೊಳಿಗೂ ಇದು ಬಹು ಮುಖ್ಯವಾದ ಚುನಾವಣೆ. ಅವರ ತಮ್ಮ ಸ್ನೇಹಿತರಾದ ಮಹೇಶ್ ಕುಮಟಳ್ಳಿ ( ಅಥಣಿ), ಶ್ರೀಮಂತ ಪಾಟೀಲ್ (ಕಾಗವಾಡ) ಇವರನ್ನು ಗೆಲ್ಲಿಸುವ ಹೊಣೆಯ ಜೊತೆಗೆ, ತಮ್ಮ ರಾಜಕೀಯ ಕಡು ವೈರಿ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಸೋಲಿನ ರುಚಿ ತೋರಿಸುವ ಶಪಥ ಮಾಡಿದ್ದಾರೆ.

M.SIDDARAJU, SENIOR JOURNALIST

– ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು