ಮೈಸೂರಿನಲ್ಲಿ ಕೊರೊನಾ ತಡೆಗಾಗಿ ಸ್ವಯಂಪ್ರೇರಿತ ಲಾಕ್ಡೌನ್ !

ಮೈಸೂರು, ಆಗಸ್ಟ್ 02, 2020 (www.justkannada.in): ಮೈಸೂರಿನಲ್ಲಿ ಕೊರೊನಾ ತಡೆಗಾಗಿ ಸ್ವಯಂಪ್ರೇರಿತ ಲಾಕ್ಡೌನ್ ಮಾಡಲಾಗಿದೆ.

ಲಾಕ್ಡೌನ್ ರಿಲೀಫ್ ಮಾಡಿದ್ರೂ ಸ್ವಯಂ ಪ್ರೇರಿತವಾಗಿ ಅಂಗಡಿ ಮುಚ್ಚಿದ ವ್ಯಾಪಾರಸ್ಥರು. ನಗರದ ಸಂತೆ ಪೇಟೆ ರಸ್ತೆಯ ಅಂಗಡಿಗಳು ಬಂದ್ ಆಗಿವೆ.

ವ್ಯಾಪಾರ ವಹಿವಾಟಿಗೆ ಒತ್ತು ನೀಡುವ ಉದ್ದೇಶದಿಂದ ಸಂಡೇ ಲಾಕ್ಡೌನ್ ರದ್ದು ಮಾಡಲಾಗಿತ್ತು. ಆದರೆ ಲಾಕ್ಡೌನ್ ಸಡಿಲಿಕೆಗೊಳಿಸಿ ಸಂಡೆ ಕರ್ಫ್ಯೂ ರದ್ದು ಮಾಡಿದ್ದ ಸರ್ಕಾರ.

ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಮುಂದುವರೆಸಿದ ಸಂತೆಪೇಟೆ ವ್ಯಾಪಾರಸ್ಥರು. ಮೈಸೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಳ ಹಿನ್ನೆಲೆ ಈ ಕ್ರಮ ವಹಿಸಲಾಗಿದೆ.

ಸ್ವಯಂ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಕೊರೊನಾ ವಿರುದ್ಧ ಹೋರಾಟ ಮಾಡಲಾಗಿದೆ.