Sunday, August 23, 2026

BDA Apartments

Home Front Page ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ವ್ಲಾದಿಮಿರ್ ಪುಟಿನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ

ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ವ್ಲಾದಿಮಿರ್ ಪುಟಿನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ

ಬೆಂಗಳೂರು, ಡಿಸೆಂಬರ್ 17, 2023 (www.justkannada.in): ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ವ್ಲಾದಿಮಿರ್ ಪುಟಿನ್ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.

ಎರಡು ದಶಕಗಳಿಗೂ ಹೆಚ್ಚು ಕಾಲ ಅಧ್ಯಕ್ಷರಾಗಿರುವ ಪುಟಿನ್ ಅವರು ಮುಂದಿನ ಮಾರ್ಚ್’ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಇನ್ನೂ ಆರು ವರ್ಷಗಳ ಅವಧಿಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಪುಟಿನ್ ಆಡಳಿತಾರೂಢ ಯುನೈಟೆಡ್ ರಷ್ಯಾ (UR) ಪಕ್ಷದ ಸಂಪೂರ್ಣ ಬೆಂಬಲವನ್ನ ಹೊಂದಿದ್ದರೂ ಸಹ ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ.

ಪುಟಿನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಯುಆರ್ ಪಕ್ಷದ ಹಿರಿಯ ಅಧಿಕಾರಿ ಆಂಡ್ರೆ ತುರ್ಚಾಕ್ ಹೇಳಿದ್ದಾರೆ.