ಚುನಾವಣೆಗೆ ತಳುಕು ಹಾಕಿ ಐಶ್ವರ್ಯಾ ರೈ ಫೋಟೋ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ವಿವೇಕ್ ಒಬೆರಾಯ್

ಮುಂಬೈ:ಮೇ-20:(www.justkannada.in) ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ದೇಶಾದ್ಯಂತ ಚುನಾವಣಾ ಫಲಿತಾಂಶದ ಕುರಿತು ಭಾರೀ ಚರ್ಚೆ ಆರಂಭವಾಗಿರುವ ನಡುವೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮಾಡಿರುವ ಟ್ವೀಟ್ ಒಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಚುನಾವಣಾ ಅಂತಿಮ ಫಲಿತಾಂಶಕ್ಕಾಗಿ ಇಡೀ ದೇಶ ನಿರೀಕ್ಷಿಸುತ್ತಿದೆ. ಈ ವೇಳೆ ವಿವೇಕ್ ಒಬೆರಾಯ್ ಐಶ್ವರ್ಯಾ ರೈ ಅವರ ಕುರಿತು ಹಂಚಿಕೊಂಡಿರುವ ಫೋಟೋ ಒಂದು ಟ್ವಿಟರ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ಇರುವ ಫೋಟೋವನ್ನು ಚುನಾವಣೆಗೆ ತಳುಕು ಹಾಕಿ ಟ್ವೀಟ್ ಮಾಡಿದ್ದಾರೆ.

ಸಲ್ಮಾನ್ ಖಾನ್-ಐಶ್ವರ್ಯಾ ರೈ ಫೋಟೋವನ್ನು ‘opinion poll’ಗೆ, ವಿವೇಕ್-ಐಶ್ವರ್ಯಾ ಜೋಡಿಯ ಫೋಟೋವನ್ನು ‘exit poll’ಗೆ, ಐಶ್ವರ್ಯಾ-ಅಭಿಷೇಕ್ ಮತ್ತು ಆರಾಧ್ಯಾ ಇರುವ ಫೋಟೋವನ್ನು ‘final result’ಗೆ ಹೋಲಿಸಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಒಳ್ಳೆ ಸೃಜನಾತ್ಮಕವಾಗಿದೆ! ಯಾವುದೇ ರಾಜಕೀಯ ಬೇಡ…. ಜಸ್ಟ್ ಲೈಫ್” ಎಂದು ವಿವೇಕ್ ಕಾಮೆಂಟ್ ಮಾಡಿ ಪೋಸ್ಟ್ ಮಾಡಿದ್ದಾರೆ.

ವಿವೇಕ್ ಒಬೆರಾಯ್ ಅವರ ಕೀಳುಮಟ್ಟದ ಪೋಸ್ಟ್ ಗೆ ಆಕ್ರೋಶಗೊಂಡಿರುವ ನೆಟ್ಟಿಗರು, ಇದು ನಿಮ್ಮ ಕೆಟ್ಟ ಅಭಿರುಚಿಯನ್ನು ತೋರುತ್ತದೆ. ಇನ್ನೊಬ್ಬರ ವೈಯಕ್ತಿಕ ಬದುಕನ್ನು ಇಲ್ಲಿ ಚರ್ಚಿಸಬೇಕಾಗಿಲ್ಲ. ನಿಮಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.

ಚುನಾವಣೆಗೆ ತಳುಕು ಹಾಕಿ ಐಶ್ವರ್ಯಾ ರೈ ಫೋಟೋ ಟ್ವೀಟ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ವಿವೇಕ್ ಒಬೆರಾಯ್
Vivek Oberoi tweets meme on aishwarya rai salman khan abhishek bachchan