Thursday, August 13, 2026

BDA Apartments

Home Front Page ಯಾವುದೇ ಜಿಲ್ಲೆಗೆ ಹೋದ್ರೂ ಪಕ್ಷದ ಕಚೇರಿಗೆ ಭೇಟಿ ನೀಡುವ ಪರಿಪಾಠ ನನ್ನದು; ಸಚಿವ ಎಸ್ ಟಿ...

ಯಾವುದೇ ಜಿಲ್ಲೆಗೆ ಹೋದ್ರೂ ಪಕ್ಷದ ಕಚೇರಿಗೆ ಭೇಟಿ ನೀಡುವ ಪರಿಪಾಠ ನನ್ನದು; ಸಚಿವ ಎಸ್ ಟಿ ಸೋಮಶೇಖರ್…

ಕೊಡುಗು,ಜು,2,2020(www.justkannada.in):  ಸಾಮಾನ್ಯವಾಗಿ ನಾನು ಯಾವ ಜಿಲ್ಲೆಯ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿಯ ಬಿಜೆಪಿಯ ಕಚೇರಿಗೆ ನಾನು ಹೋಗುತ್ತೇನೆ. ಅಲ್ಲಿ ನಮ್ಮ ಸರ್ಕಾರದ ಮುಖ್ಯ ಕಾರ್ಯಕ್ರಮಗಳು ಹಾಗೂ ನಮ್ಮ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಕೊಡಗು ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಚಿವ ಎಸ್.ಟಿ ಸೋಮಶೇಖರ್  ಮುಖಂಡರು ಹಾಗೂ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದರು. ನಂತರ ಮಾತನಾಡಿದ ಅವರು, ಯಾವುದೇ ಜಿಲ್ಲೆಗೆ ಕಾರ್ಯಕ್ರಮಕ್ಕೆ ಹೋದರೇ ಪಕ್ಷದ ಕಚೇರಿಗೆ ಭೇಟಿ ನೀಡುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾಗಿ ತಿಳಿಸಿದರು.visit-party-office-any-district-kodagu-minister-s-t-somashekhar

ಕೋ ಆಪರೇಟಿವ್ ನಾಮಿನೈಶನ್ ಗೆ ಸಂಬಂಧಪಟ್ಟಂತೆ ಪಕ್ಷದ ಜಿಲ್ಲಾಧ್ಯಕ್ಷರು, ಪಕ್ಷದ ಶಾಸಕರು ಇಲ್ಲವೇ ಸಂಸದರಿಂದ ಪತ್ರ ತಂದರೆ ಮಾಡಿಕೊಡುತ್ತೇನೆ. ಅಲ್ಲದೆ, ನನ್ನ ಇಲಾಖೆಗೆ ಸಂಬಂಧಪಟ್ಟ ಇನ್ನಿತರ ಸಮಸ್ಯೆಗಳಿದ್ದರೆ ಗಮನಕ್ಕೆ ತಂದರೆ ನಾನು ಬಗೆಹರಿಸಿಕೊಡುತ್ತೇನೆ ಎಂದು ಸಚಿವ ಎಸ್.ಟಿ ಸೋಮಶೇಖರ್  ತಿಳಿಸಿದರು.

Key words: visit -party office -any district-kodagu-Minister -S T Somashekhar.