ಬೆಂಗಳೂರು, ಅ.೨೫,೨೦೨೫: ಒರ್ವ ಹಾಲಿ ಶಾಸಕ, ಮತ್ತೊರ್ವ ಮಾಜಿ ಸಂಸದ. ಈ ಇಬ್ಬರು ಕನ್ನಡದ ಹೆಸರಾಂತ ಪತ್ರಕರ್ತರೊಬ್ಬರ ಗರಡಿಯಲ್ಲಿ ಪಳಗಿದ ಶಿಷ್ಯರು. ಆದರೆ ಈಗ ಈ ಶಿಷ್ಯರಿಬ್ಬರು ಸಾರ್ವಜನಿಕವಾಗಿಯೇ ಅಶ್ಲೀಲವಾಗಿ ಬೈದಾಡಿ, ಕಿತ್ತಾಡುತ್ತಿರುವುದು ಖುದ್ದು ಗುರುವೇ ರೋಸಿ ಹೋಗಿದ್ದಾರೆ. ಈ ಜಗಳಕ್ಕೆ ಬ್ರೇಕ್ ಹಾಕುವಂತೆ “ಪೇಸ್ ಬುಕ್” ಮೂಲಕ ತಿಳಿಸಿದ್ದಾರೆ.
ಅಂದ್ಹಾಗೆ ಹಾಲಿ ಶಾಸಕ ಕಾಂಗ್ರೆಸ್ ನ ಪ್ರದೀಪ್ ಈಶ್ವರ್ ಹಾಗೂ ಮಾಜಿ ಸಂಸದ, ಬಿಜೆಪಿಯ ಪ್ರತಾಪ್ ಸಿಂಹ. ಇವರಿಬ್ಬರ ಗುರು, ಪತ್ರಕರ್ತರಾದ ವಿಶ್ವೇಶ್ವರ ಭಟ್. ಈಗ ಭಟ್ ಅವರೇ ಫೇಸ್ ಬುಕ್ ನಲ್ಲಿ ಶಿಷ್ಯಂದಿರ ಕಿತ್ತಾಟದ ಬಗ್ಗೆ ಬೇಸರ ವ್ಯಕ್ತಪಡಿಸಿ ಬರೆದಿರುವುದು. ಅದು ಹೀಗಿದೆ. ಒವರ್ ಟು ವಿ.ಭಟ್..

ಪ್ರತಾಪ ಸಿಂಹ ಮತ್ತು ಪ್ರದೀಪ ಈಶ್ವರ ನನಗೆ ಅತ್ಯಾಪ್ತರು. ಅವರಿಬ್ಬರೂ ರಾಜಕೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯ ಬಿಟ್ಟು ವೈಯಕ್ತಿಕವಾಗಿ ಪರಸ್ಪರ ನಿಂದಿಸಿಕೊಳ್ಳುವುದನ್ನು ನೋಡಿ, ನಾನು ಕುಬ್ಜನಾಗಿ ಹೋಗಿದ್ದೇನೆ. “ಭಟ್ರೇ, ನಿಮ್ಮ ಶಿಷ್ಯರು ಬೀದಿ ಜಗಳವಾಡುವುದನ್ನು ನೋಡಿ ಸುಮ್ಮನಿದ್ದೀರಲ್ಲ?” ಎಂದು ಬೀದಿಯಲ್ಲಿ ಹೋಗುವವರೂ ನನ್ನನ್ನು ಪ್ರಶ್ನಿಸುವಂತಾಗಿದೆ.

ಇಷ್ಟು ದಿನಗಳ ಕಾಲ ನಾನು ಅವರ ರಾಜಕೀಯ ನಿಲುವು-ಒಲವುಗಳ ಬಗ್ಗೆ ಏನನ್ನೂ ಹೇಳದೇ ಅಂತರ ಕಾಯ್ದುಕೊಂಡಿದ್ದೆ. ಅವರವರ ರಾಜಕೀಯ ಅವರವರಿಗೆ ಅಂತ ಸುಮ್ಮನೆ ಇದ್ದೆ. ಅದು ನನಗೆ ಸಂಬಂಧಪಡದ ವಿಷಯ ಕೂಡ. ಆದರೆ ಬರಬರುತ್ತಾ ಇಬ್ಬರು ವೈಯಕ್ತಿಕ ನಿಂದನೆಯಲ್ಲಿ ತೊಡಗಿ ಹಳಿ ತಪ್ಪುತ್ತಿದ್ದಾರೆ ಅನಿಸಲಾರಂಭಿಸಿತು.
ನನಗೆ ಇಬ್ಬರೂ ಬೇಕಾದವರೇ. ನಾನು ಇಬ್ಬರ ಶ್ರೇಯಸ್ಸನ್ನು ಬಯಸುವವನು. ಇಬ್ಬರೂ ಶರಂಪರ ಜಗಳವಾಡುವುದನ್ನು ನೋಡಿ ಸುಮ್ಮನಿದ್ದರೆ, ನಾನು ನೈತಿಕ ಹೊಣೆಗಾರಿಕೆಯಿಂದ ವಿಮುಖನಾಗುತ್ತಿದ್ದೇನೆ ಎಂದು ಎರಡು ದಿನಗಳಿಂದ ನನಗೆ ಬಲವಾಗಿ ಅನಿಸುತ್ತಿದೆ.

ಇಬ್ಬರಲ್ಲೂ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ – ಇಬ್ಬರೂ ರಾಜಕೀಯ ಮತ್ತು ಜನಪರ ವಿಷಯಗಳ ಬಗ್ಗೆ ಚರ್ಚೆ ಮಾಡಿ, ವಾದ-ಸಂವಾದ ಮಾಡಿ, ಒಳ್ಳೆಯದೇ. ದಯವಿಟ್ಟು ನಿಮ್ಮ ಜಗಳದಲ್ಲಿ ನಿಮ್ಮ ತಂದೆ-ತಾಯಿಗಳನ್ನು ಎಳೆಯಬೇಡಿ. ಅಂದರೆ ನಿಮ್ಮ ನಿಮ್ಮ ವೈಯಕ್ತಿಕ ಮತ್ತು ತೀರಾ ಕ್ಷುಲ್ಲಕ ವಿಷಯಗಳನ್ನು ಪ್ರಸ್ತಾಪಿಸಿ ಕಿತ್ತಾಡಬೇಡಿ. ಇಬ್ಬರೂ ಯುವ ನಾಯಕರಾಗಿ ಈಗಾಗಲೇ ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದೀರಿ, ಭರವಸೆ ಮೂಡಿಸಿದ್ದೀರಿ. ಆ ಕುರಿತು ನನಗೆ ನಿಮ್ಮಿಬ್ಬರ ಬಗ್ಗೆ ಅತೀವ ಅಭಿಮಾನವಿದೆ. ನಿಮ್ಮಿಬ್ಬರಿಗೂ ಸುದೀರ್ಘವಾದ ರಾಜಕೀಯ ಜೀವನವಿದೆ, ಇನ್ನೂ ಉತ್ತಮ ಭವಿಷ್ಯವಿದೆ. ಜನರ ನಿರೀಕ್ಷೆಯೂ ನಿಮ್ಮಿಬ್ಬರ ಮೇಲೆ ಜಾಸ್ತಿಯಿದೆ. ಒಮ್ಮೆ ಸಮಾಧಾನದಿಂದ ನೀವು ನಡೆದು ಬಂದ ದಾರಿಯನ್ನು ಹಿಂತಿರುಗಿ ನೋಡಿ. ಈ ಕಿತ್ತಾಟವನ್ನು ಇಲ್ಲಿಗೆ ನಿಲ್ಲಿಸಿ, ಸಾಕು. Enough.”
key words: street fights,I feel like a dwarf, Vishweshwar Bhatt, Prathap simha, Pradeep Eswar.

SUMMARY:
Seeing the street fights between them, I feel like a dwarf: Vishweshwar Bhatt

Pratap Simha and Pradeepa Eshwar are very close to me. Seeing them both insult each other personally, leaving aside the issue of politics and public interest, I have become a dwarf. ” don’t you remain silent when you see your disciples fighting in the street?” Even people passing by on the street question me.






