Wednesday, August 5, 2026

BDA Apartments

Home Front Page GST ಬಂದಾಗಿನಿಂದ ಟ್ಯಾಕ್ಸ್ ಟೆರರಿಸಂ ಇದೆ- ಸಚಿವ ಸಂತೋಷ್ ಲಾಡ್ 

GST ಬಂದಾಗಿನಿಂದ ಟ್ಯಾಕ್ಸ್ ಟೆರರಿಸಂ ಇದೆ- ಸಚಿವ ಸಂತೋಷ್ ಲಾಡ್ 

 ಬೆಂಗಳೂರು, ಫೆಬ್ರವರಿ,2,2026 (www.justkannada.in):  ಜಿಎಸ್ ಟಿ ಬಂದಾಗಿನಿಂದ ಟ್ಯಾಕ್ಸ್ ಟೆರರಿಸಂ ಇದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್, ಸಿಜೆ ರಾಯ್ ಆತ್ಮಹತ್ಯೆ ನನಗೂ ಬೇಸರ ತರಿಸಿದೆ. ಸಿಜೆ ರಾಯ್  ನನಗೂ ಕೂಡ ಒಳ್ಳೆಯ ಸ್ನೇಹಿತರಾಗಿದ್ದರು ಐಟಿ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆನಾ ಎಂಬ ಬಗ್ಗೆ ಗೊತ್ತಿಲ್ಲ ಎಂದರು.

ಜಿಎಸ್ ಟಿ ಬಂದಾಗಿನಿಂದ ಟ್ಯಾಕ್ಸ್ ಟೆರರಿಸಂ ಇದೆ. ಜಿಎಸ್ ಟಿ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ. ಅಧಿಕಾರ ಬಂದಾಗ ಏನು ಮಾಡುತ್ತೇವೆ ಅಂತಾ ಹೇಳಿದರು.  ಮೇಕ್ ಇನ್ ಇಂಡಿಯಾ  ಆ ಇಂಡಿಯಾ ಅಂತಾ ಹೇಳಿಕೊಂಡು ಸಿಂಹವನ್ನು ಆ ಕಡೆ ಈ ಕಡೆ ತಿರುಗಿಸಿಬಿಟ್ಟರು. ಬಿಜೆಪಿಯವರು ಹಿಂದೂ ಧರ್ಮ ದೇವರ ಬಗ್ಗೆ ಮಾತನಾಡುತ್ತಾರೆ.  ವಿಚಾರಗಳ ಬಗ್ಗೆ ಇಲ್ಲಿ ಯಾರೂ ಮಾತನಾಡಲ್ಲ ಎಂದು  ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.

Key words: GST, Tax terrorism, GST, Minister, Santosh Lad