Wednesday, September 2, 2026

BDA Apartments

Home Front Page ”ಬೇಸರದ” ಗೆಲುವಿನೊಂದಿಗೆ ಟಿ-20 ಟೀಂ ಇಂಡಿಯಾ ನಾಯಕತ್ವ ತ್ಯಜಿಸಿದ ಕೊಹ್ಲಿ

”ಬೇಸರದ” ಗೆಲುವಿನೊಂದಿಗೆ ಟಿ-20 ಟೀಂ ಇಂಡಿಯಾ ನಾಯಕತ್ವ ತ್ಯಜಿಸಿದ ಕೊಹ್ಲಿ

ಬೆಂಗಳೂರು, ನವೆಂಬರ್ 09, 2021 (www.justkannada.in):  ಟೀಮ್ ಇಂಡಿಯಾ ಟಿ-20 ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ.

ಟಿ20 ವಿಶ್ವಕಪ್​ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ದ ತಂಡವನ್ನು ಮುನ್ನಡೆಸುವ ಮೂಲಕ ಕೊಹ್ಲಿ ಕೊನೆಯ ಬಾರಿ ಟಿ20 ತಂಡದ ನಾಯಕನಾಗಿ ಆಟವಾಡಿದರು.

ಈ ಬಾರಿ ಟ್ರೋಫಿ ಗೆಲ್ಲುವ ಫೇವರೇಟ್ ತಂಡವಾಗಿ ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ, ಲೀಗ್ ಹಂತದಿಂದಲೇ ಹೊರಬೀಳುವ ಮೂಲಕ ನಿರಾಸೆ ಮೂಡಿಸಿತು.

2017 ರಲ್ಲಿ ಟಿ20 ತಂಡದ ಚುಕ್ಕಾಣಿ ಹಿಡಿದ ವಿರಾಟ್ ಕೊಹ್ಲಿ ಇದುವರೆಗೆ 50 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ಇದರಲ್ಲಿ 30 ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಇನ್ನು 4 ಪಂದ್ಯಗಳಲ್ಲಿ ಫಲಿತಾಂಶ ಮೂಡಿಬರದಿದ್ದರೆ, 16 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿತ್ತು.