ದಾದಾ ದಾಖಲೆ ಮುರಿದ ಕಿಂಗ್ ಕೊಯ್ಲಿ

ಹ್ಯಾಮಿಲ್ಟನ್, ಫೆಬ್ರವರಿ 0, 2019 (www.justkannada.in): ವಿರಾಟ್ ಕೊಹ್ಲಿ ತಮ್ಮ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ.

ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸುವ ಮೂಲಕ ಮಾಜಿ ನಾಯಕ ಸೌರವ್ ಗಂಗುಲಿ ಅವರ ದಾಖಲೆಯೊಂದನ್ನು ಮುರಿದರು.

ನ್ಯೂಝಿಲ್ಯಾಂಡ್ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ 63 ಎಸೆತಗಳಲ್ಲಿ 51 ರನ್ ಗಳಿಸಿದರು. 31ರ ಹರೆಯದ ಕೊಹ್ಲಿ ನಾಯಕನಾಗಿ ಒಟ್ಟು 5,123 ರನ್ ಗಳಿಸಿದ್ದಾರೆ.

ಈ ಮೂಲಕ 148 ಏಕದಿನ ಪಂದ್ಯಗಳಲ್ಲಿ 5,082 ರನ್ ಗಳಿಸಿದ್ದ ಗಂಗುಲಿ ದಾಖಲೆಯನ್ನು ಹಿಂದಿಕ್ಕಿದರು.