ಬಂಗಾಳ ಕ್ರಿಕೆಟ್ ಸಂಸ್ಥೆಗೆ ಅತೀ ಕಿರಿಯ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ

ಕೋಲ್ಕತ್ತ, ಫೆಬ್ರವರಿ 06, 2019 (www.justkannada.in): ಬಂಗಾಳ ಕ್ರಿಕೆಟ್ ಸಂಸ್ಥೆಯ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಅಭಿಷೇಕ್ ದಾಲ್ಮಿಯಾ ಅವಿರೋಧವಾಗಿ ಆಯ್ಕೆಯಾದರು.

ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ 38 ವರ್ಷದ ಅಭಿಷೇಕ್ ಅವರನ್ನು ನೇಮಕ ಮಾಡಲಾಯಿತು. ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ನಂತರ ಈ ಸ್ಥಾನ ತೆರವಾಗಿತ್ತು.

ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅಭಿಷೇಕ್ ಅವರು 2021ರ ನವೆಂಬರ್ 6ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವಕಾಶ ವಿದೆ. ಅದರ ನಂತರ ಅವರು ಕೂಲಿಂಗ್ ಆಫ್ (ವಿರಾಮ) ನಿಯಮಕ್ಕೆ ಒಳಪಡಲಿದ್ದಾರೆ. ಸಿಎಬಿಗೆ ಅವರು 18ನೇ ಅಧ್ಯಕ್ಷರಾಗಿದ್ದಾರೆ.