ಸೆಪ್ಟೆಂಬರ್ 2ರಂದು ಕಿಚ್ಚನ ಬರ್ತ್ ಡೇಗೆ ವಿಕ್ರಾಂತ್ ರೋಣ ಒಟಿಟಿಗೆ

ಬೆಂಗಳೂರು, ಆಗಸ್ಟ್ 25, 2022 (www.justkannada.in): ಬಾಕ್ಸಾಫೀಸ್‌ನಲ್ಲಿಯೂ ಭರ್ಜರಿ ಸದ್ದು ಮಾಡಿದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಈಗ ಜೀ5 ಮೂಲಕ ಒಟಿಟಿ ಲಗ್ಗೆ ಇಡಲಿದೆ.

ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನುಮದಿನ. ಈ ದಿನದಂದು ಪ್ರತಿಷ್ಠಿತ ಒಟಿಟಿ ಜೀ5ನಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗಲಿದೆ.

ಕನ್ನಡದಲ್ಲಿ ಮಾತ್ರ ವಿಕ್ರಾಂತ್ ರೋಣ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ಶೀರ್ಘದಲ್ಲಿಯೂ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಎಲ್ಲರಿಗೂ ಗೊತ್ತಿರುವಂತೆ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್​ ಸುದೀಪ್ ಜೊತೆಗೆ ಹೆಜ್ಜೆ ಹಾಕಿದ್ದ ರಾ ರಾ ರಕ್ಕಮ್ಮ ಹಾಡು ಸೂಪರ್ ಹಿಟ್ ಲಿಸ್ಟ್ ಸೇರಿತ್ತು.

ನಿರೂಪ್​ ಭಂಡಾರಿ, ನೀತಾ ಅಶೋಕ್​, ಮಿಲನ ನಾಗರಾಜ್​, ​ಮಧುಸೂದನ್​ ರಾವ್​, ರವಿಶಂಕರ್ ಗೌಡ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.