‘ವಿಕ್ರಾಂತ್ ರೋಣ’ ತಂಡದಿಂದ ಹೊರಬಿತ್ತು ಹೊಸ ಸುದ್ದಿ!

ಬೆಂಗಳೂರು, ಜುಲೈ 01, 2021 (www.justkannada.in): ಕಿಚ್ಚ ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ಸಿನಿಮಾ  3ಡಿ ವರ್ಷನ್​ನಲ್ಲೂ ಸಿದ್ಧವಾಗುತ್ತಿದೆ.

ಚಿತ್ರದ ಕುರಿತ ಹೊಸ ಸುದ್ದಿ ಹೊರಬಿದ್ದಿದೆ. ಸ್ವತಃ ಸುದೀಪ್ ಕೆಲ ಅಪ್ ಡೇಟ್ ಗಳನ್ನು ನೀಡಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಹುತೇಕ ಶೂಟಿಂಗ್​ ಮುಗಿಸಿಕೊಂಡಿರುವ ವಿಕ್ರಾಂತ್​ ರೋಣ ತಂಡ ಈಗ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ತೊಡಗಿಕೊಂಡಿದೆ.

ಲಾಕ್​ಡೌನ್​ ಸಡಿಲ ಆಗುತ್ತಿದ್ದಂತೆಯೇ ಸುದೀಪ್​ ಕೂಡ ಡಬ್ಬಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ಹಾಡುಗಳ ಚಿತ್ರೀಕರಣ ಮಾಡುವುದು ಬಾಕಿ ಇದೆ.

ವಿಕ್ರಾಂತ್​ ರೋಣ ಚಿತ್ರಕ್ಕಾಗಿ ನಾನು ಧ್ವನಿ ನೀಡುವ ಕೆಲಸ ಪೂರ್ಣಗೊಳಿಸಿದ್ದೇನೆ. ಇದೊಂದು ಅದ್ಭುತ ಅನುಭವ ಎಂದಿದ್ದಾರೆ ಕಿಚ್ಚ.