ಟೋಕಿಯೋ ಒಲಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಮಹಿಳಾ ಗಾಲ್ಫರ್ ಬೆಂಗಳೂರಿನ ಅದಿತಿ ಅಶೋಕ್

ಬೆಂಗಳೂರು, ಜುಲೈ 01, 2021 (www.justkannada.in): ಟೋಕಿಯೋ ಒಲಂಪಿಕ್ಸ್‌ಗೆ ಬೆಂಗಳೂರಿನ ಗಾಲ್ಫರ್ ಅದಿತಿ ಅಶೋಕ್ ಅರ್ಹತೆ ಪಡೆದಿದ್ದಾರೆ.

ಒಲಂಪಿಕ್ಸ್‍ಗೆ ಅರ್ಹತೆ ಪಡೆದ ಮೊದಲ ಮಹಿಳಾ ಗಾಲ್ಫರ್ ಎಂಬ ಗೌರವಕ್ಕೂ ಅದಿತಿ ಅಶೋಕ್ ಪಾತ್ರರಾಗಿದ್ದಾರೆ. ಈ ಮೂಲಕ ಬೆಂಗಳೂರು ಮೂಲದ ಅದಿತಿ ಅಶೋಕ್ ಗಾಲ್ಫರ್ ಆಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಗಾಲ್ಫರ್ ಅದಿತಿ ಅಶೋಕ್‍ಗೆ ಆಯ್ಕೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಕೂಡ ಸಂತಸ ವ್ಯಕ್ತಪಡಿಸಿ ಟ್ವೀಟ್​ ಮಾಡಿದೆ.

ಒಲಂಪಿಕ್ ಶ್ರೇಯಾಂಕದ ಅಂತಿಮಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಅದಿತಿ ಅಶೋಕ್ ಹೆಸರು 45ನೇ ಶ್ರೇಯಾಂಕ ಪಡೆದಿದ್ದಾರೆ.